ಮೇಷ: ಚಾತುರ್ಯದ ಮನೋಭಾವ ಹೊಂದಿರುವ ಒಬ್ಬರು ನಿಮ್ಮ ಪಾಲುದಾರರಾಗಬಲ್ಲರು. ಇದರಿಂದ ಲಾಭವೂ ಇದೆ.
ವೃಷಭ: ವಿನೂತನ ಸಾಹಸಕ್ಕಾಗಿ ಪ್ರಯತ್ನಪಡುವ ನಿರ್ಧಾರ ಸ್ವಾಗತಾರ್ಹವೇ ಆಗಿದೆ. ಆದರೆ ಅತಿಯಾದ ಗಡಿಬಿಡಿ ಬೇಡ.
ಮಿಥುನ: ಹಿರಿಯರ ಬಗೆಗಿನ ತಾತ್ಸಾರದ ಭಾವನೆಯನ್ನು ಬಿಡಿ. ಹಿರಿಯರಿಂದ ಜೀವನಕ್ಕೆ ಬೇಕಾದ ಯಶಸ್ಸಿನ ಕೀಲಿಕೈ ಲಭಿಸುತ್ತದೆ.
ಕಟಕ: ಅತಿಥಿ ಸತ್ಕಾರದಿಂದಾಗಿ ಹಲವಾರು ಜನ ಹೊಸ ಪ್ರಭಾವಿಗಳ ಸಂಪರ್ಕ ಒದಗಿಬರಲಿದೆ. ಭವಿಷ್ಯದ ಬಗ್ಗೆ ನಿರಾಳವಾಗಿರಿ.
ಸಿಂಹ: ಮೌನವೇ ಬಂಗಾರ ಎಂಬ ಗಾದೆಮಾತನ್ನು ಪಾಲಿಸಿ. ಅಲ್ಲದೆ ಸಂತುಲಿತ ಮಾತುಗಳು ಕೂಡ ಗೆಲುವನ್ನು ತಂದುಕೊಡಬಲ್ಲವು.
ಕನ್ಯಾ: ವ್ಯರ್ಥ ವೆಚ್ಚಕ್ಕೆ ಕಡಿವಾಣ ಹಾಕಲು ಕಾಲಮಿತಿ ನಿಗದಿಪಡಿಸಿ. ಬಾಳಸಂಗಾತಿಯಿಂದ ಹೊಸ ಸಲಹೆಗಳು ಸಿಗಬಹುದಾಗಿದೆ.
ತುಲಾ: ಹಟಮಾರಿಗಳೆಂದು ನಿಮಗೆ ಹಣೆಪಟ್ಟಿಯನ್ನು ಅಂಟಿಸಬಹುದು. ಹಾಗಾಗದಂತೆ ಮುಗುಳು ನಗೆಯಲ್ಲೇ ದಿನ ಕಳೆಯಿರಿ.
ವೃಶ್ಚಿಕ: ಉನ್ನತವಾದ ವಿದ್ಯಾಭ್ಯಾಸವನ್ನು ಮಾಡಲು ಬಯಸುವವರಿಗಾಗಿ ಹೊಸ ವ್ಯವಸ್ಥೆಯೊಂದು ತಾನಾಗಿಯೇ ಕೈಗೂಡಿ ಬರಲಿದೆ.
ಧನುಸ್ಸು: ಕೆಲಸ ವಿಳಂಬವಾಗುವಂತೆ ಕಾಣಿಸಬಹುದು. ಆದರೆ ನಿಮ್ಮ ಬುದ್ಧಿಶಕ್ತಿಯಿಂದಾಗಿ ಸಿದ್ಧಿಯ ದಾರಿಯೊಂದು ತೆರೆಯುತ್ತದೆ.
ಮಕರ: ಮಹಾವಿಷ್ಣುವಿನ ಕೃಪಾಶೀರ್ವಾದದಿಂದಾಗಿ ನಿಮ್ಮ ಪಾಲಿಗೆ ಹೊಸ ಹೊಸ ಅವಕಾಶಗಳು ಬರಲಿವೆ. ಆದರೆ ನಿರಾಕರಿಸದಿರಿ.
ಕುಂಭ: ಕುಟುಂಬದವರೊಡನೆ ಆಪ್ತವಾಗಿ ಬೆರೆಯುವಿರಿ. ಕನಸಿನ ಹೊಸದೇ ಆದ ಯೋಜನೆಗಳು ಕೂಡ ಈ ಸಂದರ್ಭದಲ್ಲಿ ಹರಳುಗಟ್ಟಲಿವೆ.
ಮೀನ: ಮನೋರಂಜಕವಾದ ಉತ್ಸಾಹಿ ಮಾತುಗಳಿಂದ ಮನೆಯಲ್ಲಿ ಹರ್ಷದ ವಾತಾವರಣಕ್ಕೆ ಚಾಲನೆ ಸಿಗುತ್ತದೆ. ಶಿವನನ್ನು ಭಜಿಸಿ.
PublicNext
01/01/2021 07:12 am