ನವದೆಹಲಿ: 2022ರಲ್ಲಿ ಭಾರತದ ಬಗ್ಗೆ ಬಾಬಾ ವಂಗಾ ನೀಡಿರುವ ಭವಿಷ್ಯವಾಣಿಯೊಂದು ವೈರಲ್ ಆಗಿದ್ದು, ಭಾರತೀಯರನ್ನು ಚಿಂತೆಗೀಡು ಮಾಡಿದೆ.
ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಅಡ್ಡಹೆಸರು ಹೊಂದಿರುವ ಬಾಬಾ ವಾಂಗಾಳ ದೃಷ್ಟಿಕೋನಗಳು ಶೇ. 85ರಷ್ಟು ಸರಿಯಾಗಿವೆ ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಕೆಲವೆಂದರೆ ಚೋರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು, ಸೋವಿಯತ್ ಒಕ್ಕೂಟದ ವಿಸರ್ಜನೆ, 2004ರ ಥೈಲ್ಯಾಂಡ್ ಸುನಾಮಿ ಮತ್ತು ಬರಾಕ್ ಒಬಾಮಾ ಅವರ ಅಧ್ಯಕ್ಷತೆಯನ್ನು ಒಳಗೊಂಡಿದೆ. ಸದ್ಯ ಭಾರತದ ಬಗ್ಗೆ ಬಾಬಾ ವಂಗಾ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ಆನ್‌ಲೈನ್‌ನಲ್ಲಿ ಪ್ರಸಾರವಾದ ಕೆಲವು ಪೋಸ್ಟ್‌ಗಳ ಪ್ರಕಾರ, ದೇಶಾದ್ಯಂತ ಕ್ಷಾಮಕ್ಕೆ ಕಾರಣವಾಗುವ ಮಾರಣಾಂತಿಕ ಮಿಡತೆ ದಾಳಿಯನ್ನು ಭಾರತ ಈ ವರ್ಷ ಎದುರಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಪ್ರಪಂಚದ ತಾಪಮಾನದ ಏರಿಕೆಯಿಂದಾಗಿ ಮಿಡತೆಗಳು ಏಕಾಏಕಿ ಹೆಚ್ಚಾಗುತ್ತವೆ ಮತ್ತು ಭಾರತದಲ್ಲಿ ಬೆಳೆಗಳ ಮೇಲೆ ದಾಳಿ ಮಾಡುತ್ತವೆ, ಇದರ ಪರಿಣಾಮವಾಗಿ ಕ್ಷಾಮ ಮತ್ತು ಆಹಾರದ ಕೊರತೆ ಉಂಟಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. 2022 ಅಂತ್ಯವಾಗಲು ಇನ್ನು ನಾಲ್ಕು ತಿಂಗಳಷ್ಟೇ ಉಳಿದಿದ್ದು, ಈ ಭವಿಷ್ಯವಾಣಿ ನಿಜವಾದರೆ ಎಂಬ ಭಯ ಭಾರತೀಯರನ್ನು ಕಾಡುತ್ತಿದೆ
PublicNext
30/09/2022 07:41 am