ಕಾರವಾರ: ರಂಗಭೂಮಿಯ ಸಂಗೀತ ನಿರ್ದೇಶಕ ಮತ್ತು ಹಿನ್ನೆಲೆ ಗಾಯಕ ಸಿದ್ದಾಪುರ ಕೊಂಡ್ಲಿಯ ರಾಮಕೃಷ್ಣ ಅವರು ಗದ್ದೆಗೆ ತೆರಳಿದ್ದಾಗ ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಎಂದಿನಂತೆ ಕೃಷಿ ಕಾಯಕಕ್ಕಾಗಿ ಗದ್ದೆಗೆ ತೆರಳಿದ್ದ ವೇಳೆ ಅವರು ಹಠಾತ್ ಕುಸಿದು ಬಿದ್ದಿದ್ದಾರೆ. ತಕ್ಷಣ ಸಮೀಪದಲ್ಲಿದ್ದವರು ಬಿದ್ದಿದ್ದ ರಾಮಕೃಷ್ಣ ಅವರನ್ನು ಎಬ್ಬಿಸಲು ಪ್ರಯತ್ಬಿಸಿದ್ದಾರೆ. ಆದರೆ ಅವರ ಉಸಿರು ನಿಂತಿತ್ತು.
ಸಿದ್ದಾಪುರ ತಾಲೂಕಿನಲ್ಲಿ ಸುಧೀರ್ಘ ಕಾಲ ಸಾಮಾಜಿಕ ನಾಟಕದಲ್ಲಿ ಸಂಗೀತ ನಿರ್ದೇಶಕ ಹಾಗೂ ಹಿನ್ನೆಲೆ ಗಾಯಕರಾಗಿ ನೂರಾರು ನಾಟಕಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಕೊಂಡ್ಲಿ ರಾಮಕೃಷ್ಣಣ್ಣ ಎಂದೇ ಖ್ಯಾತರಾಗಿದ್ದ ಇವರ ನಿಧನಕ್ಕೆ ರಂಗಭೂಮಿ ಕಲಾವಿದರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
PublicNext
07/09/2022 05:44 pm