ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಬೈಕ್ ತಪ್ಪಿಸಲು ಹೋಗಿ ಗಿಡಕ್ಕೆ ಗುದ್ದಿದ ಚಾಲಕ

ಗದಗ: ಅನ್ನ ಭಾಗ್ಯ ಯೋಜನೆಯ ಅಕ್ಕಿ ಲಾರಿಯೂ ಗದಗದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಬರುವಾಗ ಲಕ್ಷ್ಮೇಶ್ವರ ಪಟ್ಟಣದ ಲಂಡಿ ಹಳ್ಳದ ರಸ್ತೆಯ ಗಿಡಕ್ಕೆ ಗುದ್ದಿದ್ದರಿಂದ ಲಾರಿಯಲ್ಲಿ ಇದ್ದ ಅಕ್ಕಿ ಚೀಲಗಳು ನೆಲಕ್ಕೆ ಬಿದ್ದಿದ್ದು, ಚಾಲಕ ಪ್ರಾಣಾ ಅಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.

ಅನ್ನಭಾಗ್ಯ ಯೋಜನೆ ಅಕ್ಕಿ ಸಾಗಿಸುತ್ತಿದ್ದ ಚಾಲಕ ಬಸವರಾಜ ವೀರಭದ್ರಗೌಡ ಕರಕನಗೌಡ (40) ಎಂದು ಗುರಿತಿಸಲಾಗಿದೆ. ಅವನು ಬೈಕ್ ತಪ್ಪಿಸಲು ಹೋಗಿ ಮರಕ್ಕೆ ಗುದ್ದಿದ್ದಾನೆ ಎಂದು ಹೇಳಲಾಗಿದೆ. ಇನ್ನೂ ಲಾರಿಯಲ್ಲಿದ್ದ ಅಕ್ಕಿಯ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

07/09/2022 03:22 pm

Cinque Terre

47.12 K

Cinque Terre

0

ಸಂಬಂಧಿತ ಸುದ್ದಿ