ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ: ವಯೋವೃದ್ದೆ ಗೆ ಬೈಕ್ ಡಿಕ್ಕಿ ಕಾಲು ಮುರಿತ : ಅವೈಜ್ಞಾನಿಕ ರಸ್ತೆ ನಿರ್ಮಾಣ ವೇ ಅಪಘಾತಕ್ಕೆ ಕಾರಣ...!

ಕೊರಟಗೆರೆ : ಮೊಮ್ಮಗನನ್ನು ಶಾಲೆಗೆ ಬಿಟ್ಟು ಬರುತ್ತಿದ್ದ ವೃದ್ಧೆಗೆ ಬೈಕ್ ಡಿಕ್ಕಿ ಯಾಗಿ ವೃದ್ಧೆಯ 2 ಕಾಲು ಮುರಿದಿದ್ದು ಸ್ಥಳೀಯ ಗ್ರಾಮಸ್ಥರು ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಘಟನೆ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮದ ಮುಖ್ಯರಸ್ತೆಯಲ್ಲಿ ಶುಕ್ರವಾರ ನಡೆದಿದೆ.

ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು ಗ್ರಾಮದ ದಾಸಪ್ಪನ ಪತ್ನಿ ಗಿರಿಯಮ್ಮ(65) ವರ್ಷದ ವೃದ್ಧೆಗೆ ದ್ವಿಚಕ್ರ ವಾಹನ ಹರಿದು ವೃದ್ದೆಯ ಎರಡು ಕಾಲುಗಳು ಮುರಿದಿದ್ದು, ಸದ್ಯ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೆಟ್ಟಿಅಗ್ರಹಾರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ತಿಂಗಳಿಗೆ 50 ಕ್ಕೂ ಹೆಚ್ಚು ಅಪಘಾತ ನಡೆಯುತ್ತಿರುತ್ತವೆ, ಅಪಘಾತವಾದಾಗ ಮಾತ್ರ ಪೊಲೀಸರು ಬರುತ್ತಾರೆ, ಅಪಘಾತದಲ್ಲಿ ಮೃತಪಟ್ಟ ಕುಟುಂಬದ ನೋವು ಕೇಳೋರು ಯಾರು.. ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತ ತಡೆಯಲು ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಬೇಕಿದೆ,100 ಕಿ.ಮೀ ವೇಗವಾಗಿ ಬರುವ ವಾಹನಗಳಿಂದ ಪದೇ ಪದೇ ಅಪಘಾತ ನಡೆಯುತ್ತಿದ್ದು ಇದಕ್ಕೆ ನೇರ ಹೊಣೆ ಕೆಶಿಪ್ ಅಧಿಕಾರಿಗಳಾಗಿದ್ದಾರೆ, ನಮ್ಮ ರಸ್ತೆಯಲ್ಲಿ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಳಲು ತೊಡಿಕೊಂಡಿದ್ದಾರೆ.

ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನೆಯನ್ನು ತಿಳಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ವರದಿ ರಾಘವೇಂದ್ರ ದಾಸರಹಳ್ಳಿ,ಪಬ್ಲಿಕ್ ನೆಕ್ಸ್ಟ್,ತುಮಕೂರು

Edited By : Nagesh Gaonkar
PublicNext

PublicNext

02/09/2022 08:58 pm

Cinque Terre

85.48 K

Cinque Terre

0

ಸಂಬಂಧಿತ ಸುದ್ದಿ