ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಬೆಳ್ಳಂಬೆಳಗ್ಗೆ ಲಾರಿ- ಕ್ರೂಸರ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಕ್ರೂಸರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪರಿಣಾಮ ಕ್ರೂಸರ್ ಚಾಲಕ ಕೃಷ್ಣಪ್ಪ ಸೇರಿದಂತೆ ಒಂಬತ್ತು ಮಂದಿ ಸ್ಥಳದಲ್ಲೇ ಜೀವ ಬಿಟ್ಟಿದ್ದರು. ಈ ದುರ್ಘಟನೆಗೆ ಕಾರಣ ಏನು ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಹೇಳಿಕೆ ಪ್ರಕಾರ, ಟೀ ಕುಡಿಯುವ ನೆಪದಲ್ಲಿ ಕೆಳಗಿಳಿದಿದ್ದ ಚಾಲಕ ಕೃಷ್ಣಪ್ಪ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಈ ಅಂಶವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ನಿಖರ ಕಾರಣ ತಿಳಿದು ಬರಲಿದೆ.
ಕ್ರೂಸರ್ ವಾಹನದಲ್ಲಿ ರಾಯಚೂರು ಹಾಗೂ ಮಾನ್ವಿಯ 23 ಜನರು ಕೂಲಿ ಕೆಲಸ ಅರಸಿ ಬೆಂಗಳೂರು ಕಡೆ ಪ್ರಯಾಣ ಬೆಳಸುತ್ತಿದ್ದರು. ಗುರುವಾರ ನಸುಕಿನಲ್ಲಿ ಈ ಅವಘಡ ಸಂಭವಿಸಿದ್ದು, ಬದುಕಿನ ಬಾಳಬಂಡಿ ನಡೆಸಲು ಹೊರಟಿದ್ದವರು ಜವರಾಯನ ಪಾದ ಸೇರಿದ್ದಾರೆ.
PublicNext
25/08/2022 02:29 pm