ಗದಗ: ಕುರಿ ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳು ಸಿಕ್ಕಿಬಿದ್ದಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಲಕ್ಷ್ಮೇಶ್ವರ ಹೊರವಲಯದ ಅಡವಿಯಲ್ಲಿ ಕುರಿಗಾಯಿಗಳು ಕುರಿ ಮೇಯಿಸುತ್ತಿದ್ದಾಗ ಎರಡು ಬೈಕ್‌ನಲ್ಲಿ ಬಂದ ನಾಲ್ವರು ಖದೀಮರು ಕುರಿಗಳ ಕಾಲು ಬಾಯಿ ಕಟ್ಟಿ ಹಾಕಿದ್ದಾರೆ. ನಂತರ ಕಳ್ಳತನ ಮಾಡಲು ಮುಂದಾಗಿದ್ದಾರೆ. ತಕ್ಷಣ ಕುರಿಗಾಯಿಯ ಮಗ ನೋಡಿ ತಂದೆ ಯಲ್ಲಪ್ಪನಿಗೆ ತಿಳಿಸಿದ್ದಾನೆ. ಯಲ್ಲಪ್ಪ ನೋಡಿ ಓಡಿ ಹೋಗರಲ್ಲೇ ಇಬ್ಬರು ಕಳ್ಳರು ಎಸ್ಕೆಪ್ ಆಗಿದ್ದಾರೆ. ಇನ್ನಿಬ್ಬರು ಕಳ್ಳರನ್ನು ಕುರಿಗಾಯಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನಲ್ಲಿ ಹಲವು ಬಾರಿ ಕುರಿಗಳ ಕಳ್ಳತನವಾಗುತ್ತಿವೆ. ಹೀಗಾಗಿ ಕುರಿಗಳ ಕಳ್ಳರ ಹಾವಳಿಯಿಂದ ಕುರಿಗಾಯಿಗಳು ಬೇಸತ್ತು ಹೋಗಿದ್ದಾರೆ. ದಿನ ನಿತ್ಯ ಅಡವಿಯಲ್ಲಿ ಕೆಲಸ ಮಾಡುತ್ತಿರುವ ಕುರಿಗಾಯಿಗಳಿಗೆ ಜೀವ ಭಯ ಸಹ ಇದೆ. ಪೊಲೀಸ್ ಇಲಾಖೆ ಅಧಿಕಾರಿಗಳು ಎಚ್ಚೆತ್ತಗೊಂಡು ಕುರಿ ಕಳ್ಳರ ಹಾವಳಿಗೆ ಬ್ರೇಕ್ ಹಾಕುವ ಕೆಲಸ ಮಾಡಬೇಕಿದೆ. ಈಗಾಗಲೇ ಕುರಿ ಕಳ್ಳರನ್ನು ಲಕ್ಷ್ಮೇಶ್ವರ ಪೊಲೀಸರಿಗೆ ಒಪ್ಪಿಸಲಾಗಿದೆ. ತಕ್ಷಣ ಅಧಿಕಾರಿಗಳ ಕಳ್ಳರಿಂದ ಹೆಚ್ಚಿನ ಮಾಹಿತಿ ಪಡೆದು ಸಂಪೂರ್ಣ ಕುರಿ ಕಳ್ಳರ ಗ್ಯಾಂಗ್ ಮಟ್ಟಾ ಹಾಕುವ ಕೆಲಸ ಮಾಡಬೇಕಿದೆ.
PublicNext
24/08/2022 08:44 pm