ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರ್ತಕರ ಮೇಲೆ ಕಳಚಿಬಿದ್ದ ದೈತ್ಯ ವಿಡಿಯೋ ಪರದೆ; ವಿಡಿಯೋ ವೈರಲ್

ಹಾಂಗ್ ಕಾಂಗ್ ನಡೆದ ಪಾಪ್ ಬ್ಯಾಂಡ್ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವವರ ಮೇಲೆ ದೈತ್ಯೆ ವಿಡಿಯೋ ಪರದೆ ಕಳಚಿ ಬಿದ್ದ ಘಟನೆ ನಡೆದಿದೆ. ಇನ್ನು ಪ್ರಸಿದ್ಧ ಮಿರರ್ ಬಾಯ್ ಬ್ಯಾಂಡ್ ಪ್ರದರ್ಶನ ನೀಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಮತ್ತೋರ್ವನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದ ಭೀತಿಗೊಳಗಾದ ಪ್ರೇಕ್ಷಕರು ಕಿರುಚಾಡಿದ್ದು, ಉಳಿದ ಕಲಾವಿದರು ಸಹಾಯಕ್ಕೆ ದಾವಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.

ಘಟನೆಗೆ ವಿಷಾದ ವ್ಯಕ್ತಪಡಿಸಿದ ಹಾಂಗ್ ಕಾಂಗ್ ಮುಖ್ಯ ಕಾರ್ಯನಿರ್ವಾಹಕ ಜಾನ್ ಲೀ, ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ. ಡಾನ್ಸರ್ಗಳು, ವೇದಿಕೆಯ ಮೇಲಿನ ಸಿಬ್ಬಂದಿ ಹಾಗೂ ಸಾವರ್ಜನಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸ್ಥಳೀಯ ಆಡಳಿತಕ್ಕೆ ತಿಳಿಸಿದ್ದಾರೆ. ಅಲ್ಲದೆ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

Edited By : Nirmala Aralikatti
PublicNext

PublicNext

31/07/2022 10:42 pm

Cinque Terre

57.07 K

Cinque Terre

0

ಸಂಬಂಧಿತ ಸುದ್ದಿ