ವರದಿ: ಈರನಗೌಡ ಪಾಟೀಲ್
ಹಾವೇರಿ: ವಿದ್ಯುತ್ ಕಂಬವೇರಿ ರಿಪೇರಿ ಮಾಡುತ್ತಿರುವ ವೇಳೆ 11 ಕೆಬಿ ಲೈನ್ ತಗುಲಿ ಸ್ವಲ್ಪ ಅಂತರದಲ್ಲಿ ಯುವಕನೋರ್ವ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹನುಮನಹಳ್ಳಿ ಗ್ರಾಮದ ರಾಮು ಎನ್ನುವ ವ್ಯಕ್ತಿ ಕಂಬವೇರಿ ರಿಪೇರಿ ಮಾಡುತ್ತಿದ್ದಾನೆ. ಈ ವೇಳೆ ಮೇಲೆ ಇದ್ದ 11 ಕೆಬಿ ಲೈನ್ ಟಚ್ ಆಗಿದೆ. ಶಾಕ್ ಹೊಡೆಯಿತು ಎಂಬ ಆತಂಕದಿಂದ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಜಿಗಿಯಲು ಪ್ರಯತ್ನ ಮಾಡಿದ್ದಾನೆ.
ಆದರೆ ಈತನ ಕಾಲು ಕರೆಂಟ್ ವೈರ ರಾಡ್ ಮೇಲೆ ಸಿಲುಕಿಕೊಂಡಿದೆ. ತಕ್ಷಣ ಗ್ರಾಮಸ್ಥರು ಈತನನ್ನು ನೋಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಯುವಕನಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಹತ್ತಿರದ ಶಿಗ್ಗಾಂವ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
21/07/2022 04:16 pm