ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಸಿಮೆಂಟ್ ಲಾರಿ ಹರಿದು ಜೋಡಿ ಎತ್ತು ಸಾವು-ರೈತ ಕಂಗಾಲು!

ಚಿಕ್ಕಬಳ್ಳಾಪುರ: ಸಿಮೆಂಟ್ ಲಾರಿಯೊಂದು ಜೋಡಿ ಎತ್ತುಗಳ ಮೇಲೆ ಹರಿದು ಎತ್ತುಗಳು ಸ್ಥಳದಲ್ಲಿಯೇ ಸಾವನೊಪ್ಪಿರೊ ಘಟನೆ ಬಾಗೇಪಲ್ಲಿ ತಾಲ್ಲೂಕಿನ ಬಿಳೂರು ಒಂಟಿ ಚಿಂತಾಮಣಿ ಗ್ರಾಮದಬಳಿ ಸಂಭವಿಸಿದೆ.

ಸಿಮೆಂಟ್ ತುಂಬಿದ್ದ 10 ಚಕ್ರದ ಎಪಿ 39 ಟಿಕೆ -2,677 ಸಂಖ್ಯೆ ವಾಹನ ಎತ್ತುಗಳ ಮೇಲೆ ಹರಿದು ಬಿಟ್ಟಿದೆ. ಇದರ ಪರಿಣಾಮ ರೈತ ಆದೆಪ್ಪ ಎನ್ನುವವರ ಎರಡೂ ಎತ್ತುಗಳು ಸತ್ತು ಹೋಗಿವೆ.

ಒಂದೂವರೆ ಲಕ್ಷ ರೂಪಾಯಿ ಕೊಟ್ಟು ಇತ್ತೀಚಿಗೆ ರೈತ ಆದೆಪ್ಪ ಈ ಜೋಡಿ ಎತ್ತುಗಳನ್ನ ಖರೀದಿಸಿದ್ದರು. ಜೀವನಕ್ಕೆ ಆಧಾರವಾಗಿದ್ದ ಈ ಎತ್ತುಗಳ ಸತ್ತು ಹೋಗಿದ್ದರಿಂದ ರೈತ ಆದೆಪ್ಪ ಕಂಗಾಲಾಗಿದ್ದಾರೆ.

Edited By :
PublicNext

PublicNext

29/06/2022 01:28 pm

Cinque Terre

64.67 K

Cinque Terre

0

ಸಂಬಂಧಿತ ಸುದ್ದಿ