ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ONGC ಹೆಲಿಕಾಪ್ಟರ್ ಪತನ: ನಾಲ್ವರು ಸಾವು

ಮುಂಬೈ : ಮುಂಬೈ ಕರಾವಳಿಯಲ್ಲಿ ಹೆಲಿಕಾಪ್ಟರ್ ಪತನಗೊಂಡು ನಾಲ್ವರು ಸಾವನ್ನಪ್ಪಿದು,ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ(ONGC) ಹೆಲಿಕಾಪ್ಟರ್ ಮುಂಬೈನಿಂದ 60 ನಾಟಿಕಲ್ ಮೈಲಿ ದೂರದಲ್ಲಿರುವ ಸಾಗರ್ ಕಿರಣ್ ರಿಗ್ ಬಳಿ ಸಮುದ್ರದಲ್ಲಿ ಪತನಗೊಂಡಿದೆ. ಒಂಬತ್ತು ಮಂದಿ ಪೈಕಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಏಳು ONGC ಸಿಬ್ಬಂದಿ ಮತ್ತು ಇಬ್ಬರು ಪೈಲೆಟ್ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.ಮೃತರನ್ನು ಮುಖೇಶ್ ಪಟೇಲ್, ವಿಜಯ್ ಮಂಡ್ಲೋಯ್, ಸತ್ಯಂಬಾದ್ ಪಾತ್ರ ಮತ್ತು ಸಂಜು ಫ್ರಾನ್ಸಿಸ್ ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ಘಟನೆ ನಡೆದ ರಿಗ್ ನಿಂದ ನೌಕಾಪಡೆಯ ಹೆಲಿಕಾಪ್ಟರ್ ನಲ್ಲಿ ನಾಲ್ವರನ್ನು ಕರೆದೊಯ್ದು ಪವನ್ ಹನ್ಸ್ ವಾಯುನೆಲೆಗೆ ಕರೆದೊಯ್ಯಲಾಯಿತು. ಅಲ್ಲಿಂದ ನಾಲ್ಕು ಆ್ಯಂಬುಲೆನ್ಸ್ ಗಳು ಅವರನ್ನು ನಾನಾವತಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

Edited By : Nirmala Aralikatti
PublicNext

PublicNext

28/06/2022 08:46 pm

Cinque Terre

44.89 K

Cinque Terre

0

ಸಂಬಂಧಿತ ಸುದ್ದಿ