ಲಕ್ನೋ: ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಮ್ಯಾನ್‌ಹೋಲ್‌ನಲ್ಲಿ ಪೊಲೀಸ್ ಅಧಿಕಾರಿ ಹಾಗೂ ಅವರ ಪತ್ನಿ ಬಿದ್ದ ಘಟನೆ ಉತ್ತರ ಪ್ರದೇಶದ ಅಲಿಘರ್‌ದಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿ ದಯಾನಂದ್ ಸಿಂಗ್ ಅಟ್ರಿ ಮತ್ತು ಅವರ ಪತ್ನಿ ಅಂಜು ಅತ್ರಿ ದಂಪತಿಯು ಬೈಕ್ ಸಮೇತ ತೆರೆದ ಮ್ಯಾನ್‌ಹೋಲ್‌ಗೆ ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಈಗ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.
ಭಾರಿ ಮಳೆ ವೇಳೆ ಪೊಲೀಸ್ ಅಧಿಕಾರಿ ಸ್ಕೂಟಿಯಲ್ಲಿ ಪತ್ನಿಯ ಜೊತೆಗೆ ಸಾಗುತ್ತಿದ್ದರು. ಈ ವೇಳೆ ಪಾದಚಾರಿ ಮಾರ್ಗದ ಪಕ್ಕದಲ್ಲಿ ನಿಲ್ಲಿಸಲು ಜಲಾವೃತವಾದ ರಸ್ತೆಯ ಸಾಗಿದಾಗ ಮ್ಯಾನ್ ಹೋಲ್‌ನಲ್ಲಿ ಬಿದ್ದಿದ್ದಾರೆ. ತಕ್ಷಣವೇ ದಾರಿಹೋಕರು ದಂಪತಿಯ ಸಹಾಯಕ್ಕೆ ಧಾವಿಸಿ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ದಯಾನಂದ ಸಿಂಗ್ ಅತ್ರಿ ಅವರು, "ನನ್ನ ಮುಂದಿರುವ ರಸ್ತೆಯು ಜಲಾವೃತಗೊಂಡಿದ್ದರಿಂದ, ನಾನು ಹೊಂಡವನ್ನು ಕಾಣಿಸದ ಕಾರಣ ಅದರಲ್ಲಿ ಬಿದ್ದಿದ್ದೇನೆ" ಎಂದು ತಿಳಿಸಿದ್ದಾರೆ.
PublicNext
19/06/2022 10:14 pm