ಕಾರವಾರ: ಚಲಿಸುತ್ತಿದ್ದ ಬೈಕ್ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಬೊಗ್ರಿಬೈಲ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಮೃತರನ್ನು ಬೊಮ್ಮಯ್ಯ ನಾಯಕ (70), ನಾರಾಯಣ ನಾಯಕ (50) ಎಂದು ಗುರುತಿಸಲಾಗಿದೆ.
ಬೊಮ್ಮಯ್ಯ ಹಾಗೂ ನಾರಾಯಣ ನಾಯಕ ಬೈಕ್‌ನಲ್ಲಿ ಬೊಗ್ರಿಬೈಲ್ ಗ್ರಾಮದಿಂದ ಅಂಕೋಲಾದತ್ತ ಸಾಗುತ್ತಿದ್ದರು. ಈ ವೇಳೆ ಹಿಂದಿನಿಂದ ಅತಿವೇಗವಾಗಿ ಆಗಮಿಸಿದ ಲಾರಿಯೊಂದು ಏಕಾಏಕಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರರಿಬ್ಬರೂ ರಸ್ತೆಯ ಮೇಲೆ ಬಿದ್ದಿದ್ದಾರೆ. ಆಗ ಇಬ್ಬರ ಮೇಲೂ ಲಾರಿ ಹರಿದಿದೆ. ಅದರಲ್ಲಿ ಓರ್ವ ಲಾರಿಯ ಚಕ್ರಕ್ಕೆ ಸಿಲುಕಿದ್ದು, ಅನತಿ ದೂರ ಎಳೆದುಕೊಂಡು ಹೋದ ಪರಿಣಾಮ ದೇಹ ಸಂಪೂರ್ಣ ಛಿದ್ರವಾಗಿದೆ. ಹೀಗಾಗಿ ಮೃತ ದೇಹವನ್ನು ಬಟ್ಟೆಯಲ್ಲಿ ಕಟ್ಟಿ ಕೊಂಡೊಯ್ಯುವಂತಾಯಿತು. ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
01/06/2022 08:13 pm