ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : ಅಕ್ಕನ ಮದುವೆಗಾಗಿ ಬಂದ ಯೋಧ ರಸ್ತೆ ಅಪಘಾತದಲ್ಲಿ ಪ್ರಾಣ ಬಿಟ್ಟ

ವಿಜಯಪುರ : ಅಕ್ಕನ ಮದುವೆಗಾಗಿ ಆಗಮಿಸಿದ್ದ ಯೋಧನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮುದ್ದೇಬಿಹಾಳ ತಾಲೂಕಿನ ಗೆದ್ದಲಮುರಿಗೆ ಗ್ರಾಮದಲ್ಲಿ ನಡೆದಿದೆ‌.

ಹೌದು ! ಭಾರತೀಯ ಸೇನೆಯ ಸಶಸ್ತ್ರ ಸೀಮಾ ಸೇನಾ ಬಲ (ಎಸ್.ಎಸ್.ಬಿ) ವಿಭಾಗದಲ್ಲಿ ತರಬೇತಿ ಮುಗಿಸಿ ಮರಳಿ ಕರ್ತವ್ಯಕ್ಕೆ ತೆರಳಬೇಕಿದ್ದ ಯೋಧ ಅಕ್ಕನ ಮದುವೆಗೆಂದು ಗ್ರಾಮಕ್ಕೆ ಆಗಮಿಸುವ ವೇಳೆ ಮುದ್ದೇಬಿಹಾಳ ತಾಲೂಕಿನ ಗೆದ್ದಲಮುರಿಗೆ ಬಳಿ ಬೈಕ್ ರಸ್ತೆ ಅಪಘಾತದಲ್ಲಿ ನಿನ್ನೆ ಸೋಮವಾರ ಸಾವನ್ನಪ್ಪಿದ್ದಾರೆ.

2021ರಲ್ಲಿ ಎಸ್.ಎಸ್.ಬಿ ತರಬೇತಿಗೆ ಹಾಜರಾಗಿದ್ದರು, ತರಬೇತಿ ಪೂರ್ಣಗೊಳಿಸಿ ಸೇವೆಗೆ ಹಾಜರಾಗುವ ಮುನ್ನವೇ ದುರಾದೃಷ್ಟವಶಾತ್ ಯೋಧ ಅಪಘಾತದಲ್ಲಿ ಅಸುನೀಗಿದ್ದಾನೆ, ಅಪಘಾತದ ವೇಳೆ ಹಿಂಬದಿ ಸವಾರನಿಗೆ ಕುಳಿತ ಯೋಧನ ಸಹೋದರನಿಗೂ ಗಾಯಗಳಾಗಿದ್ದು ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಯೋಧನ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಸಕಲ ಸೇನಾ ಗೌರವದೊಂದಿಗೆ ನೆರವೇರಲಿದೆ.

Edited By : Vijay Kumar
PublicNext

PublicNext

17/05/2022 10:24 am

Cinque Terre

45.72 K

Cinque Terre

2

ಸಂಬಂಧಿತ ಸುದ್ದಿ