ಹುಬ್ಬಳ್ಳಿ/ಸವಣೂರು : ಹೆಂಡತಿ ಮನೆಗೆ ಹೋಗಿದ್ದ ಹುಬ್ಬಳ್ಳಿ ವ್ಯಕ್ತಿಯೊರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸವಣೂರಿನಲ್ಲಿ ನಡೆದಿದೆ.
ಕೆರೆಯಲ್ಲಿ ಈಜಲು ಹೋಗಿ ಬಳ್ಳಿಯೊಂದಕ್ಕೆ ಸಿಲುಕಿಕೊಂಡು ಹೊರ ಬರಲಾಗದೆ ಹುಬ್ಬಳ್ಳಿ ಮೂಲದ ಮಂಟೂರ ರಸ್ತೆಯ ನಿವಾಸಿ ಮಕಬುಲ್ ಮಕಾಂದಾರ ಸಾವನ್ನಪ್ಪಿದ್ದಾರೆ.
ಸವಣೂರಿನ ಯುವತಿಯೊಂದಿಗೆ ಆರು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು ಎನ್ನಲಾಗಿದೆ. ಯುವಕ ಮಡದಿಯನ್ನು ಕರೆಯಲೆಂದು ಸವಣೂರಿಗೆ ಹೋಗಿದ್ದ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಿಣ ಪೊಲೀಸರು ಶವವನ್ನು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಕೈಗೊಂಡಿದ್ದಾರೆ.
PublicNext
16/05/2022 08:23 pm