ಬೆಳಗಾವಿ: ಬಸ್ ಮತ್ತು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಬೆಳಗಾವಿ ತಾಲೂಕಿನ ಸುತ್ತಗಟ್ಟಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮ ಡಾಬಾ ಎದುರಿಗೆ ಘಟನೆ ನಡೆದಿದೆ. ಈ ಭೀಕರ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೈಕ್ ಸವಾರ ಪವಾಡ ಎಂಬಂತೆ ಬದುಕುಳಿದಿದ್ದಾನೆ. ಸುತ್ತಗಟ್ಟಿ ಗ್ರಾಮದ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕ್ರಾಸ್ ದಾಟಲು ಎಂ80 ಬೈಕ್ ಸವಾರ ಮುಂದಾಗಿದ್ದ. ಇನ್ನು ಬೆಳಗಾವಿಯಿಂದ ವಿಜಯಪುರ ಕಡೆಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಅತಿವೇಗದಲ್ಲಿ ಬಂದಿದೆ. ರಸ್ತೆ ಮಧ್ಯೆ ಅಡ್ಡ ಬಂದ ಬೈಕ್ ಸವಾರನನ್ನು ತಪ್ಪಿಸಲು ಬಸ್ ಚಾಲಕ ಮುತ್ತಪ್ಪ ಎಂಬುವರು ರಸ್ತೆ ಪಕ್ಕದಲ್ಲಿ ನಿಂತಿದ್ದ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದು ಡಿವೈಡರ್ಗೆ ಗುದ್ದಿ, ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಎರಡು ಬೈಕ್ನಲ್ಲಿದ್ದ ಸವಾರರು ಹಾಗೂ ಬಸ್ನಲ್ಲಿರುವ ಪ್ರಯಾಣಿಕರ ಜೀವಗಳು ಉಳಿದಿದ್ದು ದೊಡ್ಡ ಪ್ರಮಾಣ ಅನಾಹುತ ತಪ್ಪಿದೆ.
ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಬೆಳಗಾವಿ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
PublicNext
08/05/2022 03:02 pm