ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್‌ಗೆ ಟಿಪ್ಪರ್ ಡಿಕ್ಕಿ: ದಂಪತಿ ಸೇರಿ ಮಗು ಸಾವು

ತುಮಕೂರು: ಕಾರು ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದಂಪತಿ ಹಾಗೂ ಒಂದು ವರ್ಷದ ಮಗು ಮೃತಪಟ್ಟಿದೆ. ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಸಮೀಪದ ಅರಮನೆಹೊನ್ನಮಾಚನಹಳ್ಳಿ ಬಸವಣ್ಣ ದೇವಾಲಯದ ಬಳಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.

ಚನ್ನಪಟ್ಟಣದ ಶಾಮಿಯ ಮೊಹಲ್ಲಾದ ಸೈಯದ್ ಮಹಮ್ಮದ್ ನಜ್ಮಿ (42), ಅವರ ಪತ್ನಿ ನಾಜಿಯಾ (35), ಪುತ್ರ ಒಂದು ವರ್ಷದ ಸೈಯದ್ ಕುಂದನ್ ಅಸೀ ಮೃತಪಟ್ಟವರು. ಮೂರು ವರ್ಷದ ಸೈಯದ್ ಕುಂದನ್ ನಬೀ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nagaraj Tulugeri
PublicNext

PublicNext

03/05/2022 07:35 pm

Cinque Terre

32.89 K

Cinque Terre

13

ಸಂಬಂಧಿತ ಸುದ್ದಿ