ಬೆಂಗಳೂರು: ಬ್ಯಾಂಕಾಕ್ ನಿಂದ ಹೊರಟ ವಿಮಾನವೊಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವುದಕ್ಕಿಂತ ಕೆಲವೇ ಕ್ಷಣ ಮೊದಲು ಥಾಯ್ ಏರ್ ವೇಸ್ ವಿಮಾನದ ಟೈರ್ ಸ್ಫೋಟಗೊಂಡ ಘಟನೆ ವರದಿ ಆಗಿದೆ.
ಏಪ್ರಿಲ್ 26 ರಂದು ಈ ಘಟನೆ ನಡೆದಿದ್ದು, ವಿಮಾನದ ಸಿಬ್ಬಂದಿಯೊಂದಿಗೆ ಕನಿಷ್ಠ 150 ಪ್ರಯಾಣಿಕರಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಐಎಎನ್ ಎಸ್ ವರದಿ ಮಾಡಿದೆ.
ಮಂಗಳವಾರ (ಏಪ್ರಿಲ್ 26) ರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಸಂಜೆ (ಏಪ್ರಿಲ್ 27) ಏರ್ ಲೈನ್ಸ್ ನ ತಾಂತ್ರಿಕ ತಂಡ ಸ್ಪೇರ್ ವೀಲ್ ನೊಂದಿಗೆ ಆಗಮಿಸಿದೆ. ವಿಮಾನವು ಏಪ್ರಿಲ್ 28 ರಂದು ಬೆಂಗಳೂರಿನಿಂದ ಬ್ಯಾಂಕಾಕ್ ಗೆ ಹಾರಲಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಖಚಿತಪಡಿಸಿವೆ.
ಟೈರ್ ಸ್ಫೋಟಗೊಂಡರೂ ಸಹ, ವಿಮಾನವು ಸುರಕ್ಷಿತವಾಗಿ ಟಾರ್ಮ್ಯಾಕ್ ನಲ್ಲಿ ಇಳಿಯಿತು ಎಂದು ಮೂಲಗಳು ಹೇಳಿವೆ.
PublicNext
29/04/2022 07:47 am