ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಹಂಪ್ಸ್ ನಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ ಮಗ: ರಸ್ತೆಗೆ ಬಿದ್ದು ತಾಯಿ ಸಾವು !

ಮಲ್ಪೆ : ರಸ್ತೆಯ ಮಧ್ಯದಲ್ಲಿದ್ದ ಹಂಪ್ಸ್‌ನಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಬೈಕ್‌ನಲ್ಲಿ ಸಹಸವಾರರಾಗಿದ್ದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ತಲೆಗಾದ ಗಂಭೀರ ಗಾಯದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕೆಮ್ಮಣ್ಣು ಚರ್ಚ್ ಎದುರು ನಿನ್ನೆ ಸಂಭವಿಸಿದೆ.

ಮೃತರನ್ನು ಕೊಡವೂರಿನ ಗಂಗಾ ಎಂದು ಗುರುತಿಸಲಾಗಿದೆ. ಇವರು ಮೂಲಸ್ಥಾನ ಬೇಂಗ್ರೆ ಹೂಡೆಗೆ ಹೋಗಲು ಮಗ ಆಕರ್ಷ್‌ನ ಮೋಟಾರು ಬೈಕ್‌ನಲ್ಲಿ ತೆರಳುತಿದ್ದಾಗ ಕೆಮ್ಮಣ್ಣು ಚರ್ಚ್ ಎದುರು ಈ ದುರ್ಘಟನೆ ಸಂಭವಿಸಿದೆ.

ಹಂಪ್ಸ್ ಎದುರು ಆಕರ್ಷ್ ಒಮ್ಮೆಗೇ ಬ್ರೇಕ್ ಹಾಕಿದ್ದರಿಂದ ಗಂಗಾ ರಸ್ತೆಗೆ ಬಿದ್ದರು. ಅವರನ್ನು ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟರು. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

22/04/2022 01:03 pm

Cinque Terre

35.04 K

Cinque Terre

0

ಸಂಬಂಧಿತ ಸುದ್ದಿ