ದಾಂಡೇಲಿ: ಕಾಳಿ ನದಿಯಲ್ಲಿ ರ್‍ಯಾಫ್ಟಿಂಗ್ ಹೋದಾಗ ದೋಣಿ ಸಿಲುಕಿದ ಘಟನೆ ನಡೆದಿದೆ. 8 ಜನರ ಸಾಮರ್ಥ್ಯದ ದೋಣಿಯಲ್ಲಿ 14 ಜನ ಹೋದ ಪರಿಣಾಮವಾಗಿ ಈ ಅವಘಡ ನಡೆದಿದೆ.
ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ಈ ಘಟನೆ ನಡೆದಿದೆ. ದೋಣಿಯ ಭಾರ ಹೆಚ್ಚಾಗಿ ಮುಂದೆ ಸಾಗದೇ ಸಿಲುಕಿಕೊಂಡಿದೆ. ಪ್ರವಾಸಿಗರು ಲೈಫ್ ಜಾಕೆಟ್ ಹಾಕಿದ ಪರಿಣಾಮ ಜೀವಗಳು ಉಳಿದಿವೆ.
PublicNext
15/04/2022 08:31 pm