ಶಿವಮೊಗ್ಗ: ಇಬ್ಬರು ಯುವಕರು ತುಂಗಾ ನದಿಯಲ್ಲಿ ಈಜಲು ತೆರಳಿ ಜಲಸಮಾಧಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ. ಸದ್ಯ ನೀರುಪಾಲಾಗಿ ಮೃತ ಯುವಕರನ್ನು ವರ್ಧನ್ (19) ಹಾಗೂ ಮಂಜು (20) ಎಂದು ಗುರುತಿಸಲಾಗಿದೆ.
ವಿಧಿಯಾಟವೆಂದರೆ ಈ ಇಬ್ಬರು ಯುವಕರು ಈಜಲು ತೆರಳಿರುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆದರೆ ವರ್ಧನ್ ಪೋಷಕರು ಹುಡುಕಾಟ ನಡೆಸಿ, ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ಪೊಲೀಸರು ವರ್ಧನ್ ಮೊಬೈಲ್ ನೆಟ್ ವರ್ಕ್ ಲೊಕೇಶನ್ ಆಧರಿಸಿ, ಅವರ ಸ್ಥಳದ ಮಾಹಿತಿ ಪತ್ತೆ ಹಚ್ಚಿದ್ದಾರೆ.
ನದಿ ದಂಡೆಯಲ್ಲಿ ಮೊಬೈಲ್ ಹಾಗೂ ಬಟ್ಟೆ ಕಂಡ ಪೊಲೀಸರು, ಅಗ್ನಿ ಶಾಮಕದಳ ಸಿಬ್ಬಂದಿಯವರನ್ನು ಕರೆಸಿ ಇಬ್ಬರ ಶವವನ್ನು ಹೊರಗೆ ತೆಗೆದಿದ್ದಾರೆ. ಘಟನೆ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/03/2022 09:20 pm