ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ ಬಿಟಿಪಿಎಸ್ ಆಕ್ಸಿಜನ್ ಘಟಕದಲ್ಲಿ ಸ್ಫೋಟ: ಐವರು ಕಾರ್ಮಿಕರಿಗೆ ಗಂಭೀರ ಗಾಯ

ಬಳ್ಳಾರಿ: ಬಳ್ಳಾರಿ ತಾಲೂಕಿನ ಕುಡುತಿನಿ ಬಳಿಯ ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್‌ನಲ್ಲಿನ ಆಕ್ಸಿಜನ್ ಪ್ಲಾಂಟ್‌ನಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದೆ. ಪರಿಣಾಮ ಮೂವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಕೇಂದ್ರದ 750 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೂಪರ್ ಕ್ರಿಟಿಕಲ್ ಬಾಯ್ಲರ್ ಪವರ್ ಪ್ಲಾಂಟ್‌ನಲ್ಲಿ ಆಕ್ಸಿಜನ್ ಉತ್ಪಾದನೆಗೆ ಅವಕಾಶವಿದೆ. ಈ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 6.5 ಕೋಟಿ ರೂ. ಅನುದಾನದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದರು. ಈ ಆಕ್ಸಿಜನ್ ಘಟಕವು ಪೂರ್ಣ ಪ್ರಮಾಣದಲ್ಲಿ ಚಾಲನೆ ಪಡೆದುಕೊಂಡಿರಲಿಲ್ಲ. ಇನ್ನು ಕೇವಲ ಪ್ರಾಯೋಗಿಕ ಹಂತದಲ್ಲೇ ಇತ್ತು. ಆಕ್ಸಿಜನ್ಅನ್ನು ಗ್ಯಾಸ್ ಸಿಲಿಂಡರ್‌ಗಳಿಗೆ ತುಂಬುತ್ತಿರಲಿಲ್ಲ. ಅದೇ ರೀತಿ ನಿನ್ನೆ ಶುಕ್ರವಾರ ಘಟಕದಲ್ಲಿ ಕಾರ್ಯನಿರ್ವಹಿಸಲಾಗುತ್ತಿತ್ತು. ಸಂಜೆ 7.30ರ ಸುಮಾರಿಗೆ ಘಟಕದಲ್ಲಿನ ಎಲೆಕ್ಟ್ರಿಕಲ್ ಪ್ಯಾನಲ್ ಸ್ಫೋಟಗೊಂಡಿದೆ. ಇದರಿಂದ ಆಕ್ಸಿಜನ್ ಪೈಪ್‌ಲೈನ್‌ಗಳು ಸಹ ಕಿತ್ತು ಹೋಗಿ ಸ್ಫೋಟಗೊಂಡ ಬೆಂಕಿ ವ್ಯಾಪಿಸಲು ಕಾರಣವಾಗಿದೆ. ಈ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಬಿಟಿಪಿಎಸ್ ಮೂಲಗಳು ಖಚಿತಪಡಿಸಿವೆ. ಗಾಯಗೊಂಡವರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಆದರೆ, ಮೂವರು ಗುತ್ತಿಗೆ ಕಾರ್ಮಿಕರು ಎಂದು ತಿಳಿದು ಬಂದಿದೆ.

Edited By : Manjunath H D
PublicNext

PublicNext

19/03/2022 09:14 am

Cinque Terre

129.11 K

Cinque Terre

0

ಸಂಬಂಧಿತ ಸುದ್ದಿ