ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೀಕರ ಅಪಘಾತ; ಸಿದ್ಧಗಂಗಾ ಮಠದಿಂದ ಮರಳುತ್ತಿದ್ದ ದಂಪತಿ ದಾರುಣ ಸಾವು

ತುಮಕೂರು: ರಸ್ತೆ ಅಪಘಾತದಲ್ಲಿ ಎರಡು ಕಾರುಗಳ ನಡುವೆ ಬೈಕ್ ಸಿಲುಕಿ ದಂಪತಿ ಮೃತಪಟ್ಟ ದಾರುಣ ಘಟನೆ ತುಮಕೂರು ಹೊರವಲಯದಲ್ಲಿ ನಡೆದಿದೆ.

ತುಮಕೂರಿನ ಕುವೆಂಪುನಗರ ನಿವಾಸಿಗಳಾದ ನರಸಿಂಹರಾಜು ಮತ್ತು ನಾಗರತ್ನಮ್ಮ ಮೃತ ದುರ್ದೈವಿಗಳು. ತುಮಕೂರು ಹೊರವಲಯದ ಊರ್ಡಿಗೆರೆ ರಸ್ತೆಯಲ್ಲಿನ ಸಿದ್ಧಗಂಗಾ ಮಠದ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಬೈಕ್​ನಲ್ಲಿ ಸಿದ್ಧಗಂಗಾ ಮಠದಿಂದ ಬರುತ್ತಿದ್ದ ದಂಪತಿಯು ಎರಡೂ ಕಾರುಗಳ ಮಧ್ಯೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿ​ನಲ್ಲಿ ಪ್ರಯಾಣಿಸುತ್ತಿದ್ದ ಬಜರಂಗದಳದ ತುಮಕೂರು ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಎಂಬುವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಜುರನ್ನು ಬೆಂಗಳೂರಿನ ನಿಮ್ಹಾನ್ಸ್​ಗೆ ಕಳುಹಿಸಲಾಗಿದೆ. ಇನ್ನೊಂದು ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿವೆ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

13/03/2022 07:52 am

Cinque Terre

63.14 K

Cinque Terre

0

ಸಂಬಂಧಿತ ಸುದ್ದಿ