ಬೆಂಗಳೂರು: ಗಾರೆ ಕೆಲಸ ಮಾಡುವಾಗ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕನೊಬ್ಬ ಮೃತ ಪಟ್ಟಿದ್ದಾನೆ. ನಿರ್ಮಾಣ ಹಂತದ ಎರಡನೇ ಮಹಡಿಯಲ್ಲಿ ಗಾರೆ ಕೆಲಸ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.
ತಮಿಳುನಾಡು ಮೂಲದ ಏಳುಮಲೈ ಸಾವನ್ನಪ್ಪಿರೋ ಕಾರ್ಮಿಕನಾಗಿದ್ದು, ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯ ನಾಗರಭಾವಿಯಲ್ಲಿ ಈ ಘಟನೆ ನಡೆದಿದೆ.
ಮಾರ್ಚ್ 7 ರಂದು ಕೆಲಸ ಮಾಡುವಾಗ ಎರಡನೇ ಮಹಡಿಯಿಂದ ಕೆಳ ಬಿದ್ದು ಏಳುಮಲೈ ಗಂಭೀರ ಗಾಯಗೊಂಡಿದ್ದ. ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆ ಸೇರಿಸಿದ್ದರು. ತಲೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ನಿರ್ಲಕ್ಷ್ಯ ವಹಿಸಿದ ಆರೋಪದಡಿ ಕಟ್ಟಡ ಮಾಲೀಕರಾದ ಮುನಿರಾಜು ಬಾಬು, ಶಿವಶಂಕರ್ ಚೌಧರಿ, ಶಕ್ತಿವೇಲು ಹಾಗೂ ವಡಿವೇಲು ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
09/03/2022 03:33 pm