ಕೋಲ್ಕತ್ತಾ: ಕಚ್ಚಾ ಬದಾಮ್ ಹಾಡಿನ ಮೂಲಕ ದಿನ ಬೆಳಗಾಗುವಷ್ಟರಲ್ಲಿ ದೇಶಾದ್ಯಂತ ಫೇಮಸ್ ಆಗಿದ್ದ ಬುಬನ್ ಬುಡ್ಯಾಕರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೌದು...ಹೊಸ ಕಾರು ಖರೀದಿಸಿರುವ ಬುಬನ್ ಬುಡ್ಯಾಕರ್ ಡ್ರೈವಿಂಗ್ ಕಲಿಯುವ ವೇಳೆ ಕಾರು ಗೋಡೆಗೆ ಗುದ್ದಿದೆ. ಪರಿಣಾಮ ಬುಬನ್ ಎದೆಗೆ ಪೆಟ್ಟಾಗಿದೆ. ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬುಬನ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
PublicNext
01/03/2022 02:58 pm