ಹಾವೇರಿ : ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬ್ರಿಡ್ಜ್ ಮೇಲಿಂದ ವಿ ಆರ್ ಎಲ್ ಬಸ್ ವೊಂದು ಪಲ್ಟಿಯಾಗಿ ಬಸ್ ಚಾಲಕ ಸೇರಿ ಇಬ್ಬರು ಸಾವನ್ನಪ್ಪಿ ಹದಿನೈದು ಜನ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಗೋಕಾಕಗೆ ಹೊರಟಿದ್ದ ಸ್ಲೀಪರ್ ಬಸ್ ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆಗೆ ಪಲ್ಟಿಯಾಗಿದೆ. ಸದ್ಯ ಕ್ರೇನ್ ಸಹಾಯದಿಂದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಬಸ್ ಮೇಲೆತ್ತುತ್ತಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಶಂಕರ ಮಾರಿಹಾಳ, ಸಿಪಿಐ ನಾಗಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಓವರ್ ಟೇಕ್ ಮಾಡಲು ಹೋಗಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಬ್ರಿಡ್ಜ್ ಮೇಲಿನಿಂದ ಪಲ್ಟಿಯಾಗಿದೆ.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
PublicNext
12/02/2022 10:33 am