ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲೆಯೊಳಗೆ ಇಣುಕಿ ನೋಡಿದ ಯುವಕನ ಜೀವಕ್ಕೆ ಬಂತು ಕುತ್ತು.!

ಭೋಪಾಲ್: ಯುವಕನೊಬ್ಬ ಶಾಲೆಯೊಂದರ ಒಳಗೆ ಇಣುಕಿ ನೋಡಿ ತನ್ನ ಜೀವಕ್ಕೆ ಕುತ್ತು ತಂದುಕೊಂಡ ಹಾಸ್ಯ ಪ್ರಸಂಗ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಗೋಲ್ ಪಹಾಡಿಯಾ ನಿವಾಸಿ ಬಬ್ಲು ಇಂತಹ ಪರಿಸ್ಥಿತಿ ಎದುರಿಸಿದ ಯುವಕ. ಈತ ಶಾಲಾ ಕಟ್ಟಡದ ಒಳಗೆ ಇಣುಕಿ ನೋಡಲು ಚಾನೆಲ್ ಗೇಟಿನಲ್ಲಿ ತಲೆ ಹಾಕಿದ್ದಾನೆ. ಈ ವೇಳೆ ಆತನ ಕುತ್ತಿಗೆ ಚಾನೆಲ್ ಗೇಟ್‌ನಲ್ಲಿ ಸಿಲುಕಿಕೊಂಡಿತ್ತು. ಎಷ್ಟೇ ಪ್ರಯತ್ನಿಸಿದರೂ ಯುವಕ ಬಬ್ಲುಗೆ ಅಲ್ಲಿಂದ ಪಾರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಕಿರುಚಲು ಮತ್ತು ಅಳಲು ಪ್ರಾರಂಭಿಸಿದ್ದಾನೆ. ಇದನ್ನು ಕೇಳಿಸಿಕೊಂಡ ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಚಾನೆಲ್ ಗೇಟ್ ಕಟ್ ಮಾಡಿ ಯುವಕನನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ.

Edited By : Nagesh Gaonkar
PublicNext

PublicNext

05/02/2022 09:04 am

Cinque Terre

78.88 K

Cinque Terre

7

ಸಂಬಂಧಿತ ಸುದ್ದಿ