ನವದೆಹಲಿ : ಕಾರ್ ಶೋ ರೂಮ್ ನಲ್ಲಿ ಕಾರು ಡೆಲಿವರಿ ವೇಳೆ ಅಚಾತುರ್ಯವೊಂದು ನಡೆದು ಹೋಗದೆ. ಆಟೋಮ್ಯಾಟಿಕ್ ಕಾರವೊಂದರಲ್ಲಿ, ಏನೋ ಪರೀಕ್ಷಿಸಲು ಹೋಗಿ ಏಕಾಏಕಿ ಚಲಿಸಿದೆ. ಹೌದು ಟಾಟಾ ಮೋಟಾರ್ಸ್ ಶೋ ರೂಮ್ ನಲ್ಲಿ ಅಲ್ಟ್ರೋಜ್ ಕಾರು ಡೆಲಿವರಿ ವೇಳೆ ಎಡವಟ್ಟು ನಡೆದಿದೆ. ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
ಟಾಟಾ ಶೋ ರೂಂನಲ್ಲಿ ಅಲ್ಟ್ರೋಜ್ ಗೋಲ್ಡ್ ಕಾರು ಬುಕ್ ಮಾಡಿದ್ದ ಗ್ರಾಹಕರು ಖರೀದಿಗೆ ಆಗಮಿಸಿದ್ದಾರೆ. ಈ ವೇಳೆ ಶೋ ರೂಂ ಒಳಗೆ ನಿಲ್ಲಿಸಿದ್ದ ಅಲ್ಟ್ರೋಜ್ ಗೋಲ್ಡ್ ಕಾರನ್ನು ಗ್ರಾಹಕರು ಪರಿಕ್ಷಿಸಲು ಮುಂದಾಗಿದ್ದಾರೆ. ಕಾರು ಸ್ಟಾರ್ಟ್ ಮಾಡಿದ ಗ್ರಾಹಕರು) ಪರಿಕ್ಷಿಸುತ್ತಿದ್ದಂತೆ ಕಾರು ಏಕಾಏಕಿ ಮುಂದಕ್ಕೆ ಚಲಿಸಿದೆ. ಪರಿಣಾಮ ಮುಂಭಾಗದಲ್ಲಿದ್ದ ಯುವತಿ ಹಾಗೂ ಸೋಫಾದಲ್ಲಿ ಕುಳಿತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಸಣ್ಣಪುಟ್ಟ ಗಾಯಗಳಾವೆ.
5 ಸ್ಟಾರ್ ಸೇಫ್ಟಿ ಕಾರಾಗಿರುವ ಕಾರಣ ಯಾವುದೇ ಕಾರಿಗೆ ಯಾವುದೇ ಹಾನಿ ಸಂಭವಿಸಿಲ್ಲ.ಈ ಘಟನೆ ಯಾವ ಕಾರಣಕ್ಕೆ ನಡೆಯಿತು. ದಿಢೀರ್ ಕಾರು ಚಲಿಸಲು ಕಾರಣವೇನು? ಗ್ರಾಹಕರಿಗೆ ಹೊಸ ಕಾರಿನ ತಂತ್ರಜ್ಞಾನ ಫೀಚರ್ಸ್ ಕುರಿತ ಹೆಚ್ಚಿನ ಮಾಹಿತಿ ಇರಲಿಲ್ಲವೇ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಘಟನೆಯಿಂದ ಶೋ ರೂಮ್ ನಲ್ಲಿದ್ದ ಇತರ ಗ್ರಾಹಕರು ಹಾಗೂ ಸಿಬ್ಬಂದಿಗಳು ಬೆಚ್ಚಿ ಬಿದ್ದಿದ್ದಾರೆ.
PublicNext
27/01/2022 04:17 pm