ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೌದಿ ಸುಡಲು ಹೋಗಿ ಬೆಂಕಿಗಾಹುತಿಯಾದ ರೈತ

ಹಾವೇರಿ: ತನ್ನ ಜಮೀನದಲ್ಲಿನ ಕಬ್ಬಿನ ರೌದಿ ಸುಡುಲು ರೈತ ಬೆಂಕಿ ಹಚ್ಚಿದ್ದ ಆದರೆ ಅದು ಏಕಾಏಕಿ ನಿಯಂತ್ರಣಕ್ಕೆ ಬಾರದೆ ಪಕ್ಕದ ಜಮೀನಿನ ಬೆಳೆಗಳಿಗೆ ತಗುಲುತ್ತಿದ್ದಂತೆ ಕಂಗಾಲಾದ ರೈತ ಬೆಂಕಿ ನಂದಿಸಲು ಮುಂದಾಗಿ ಆಕಸ್ಮಿಕವಾಗಿ ಅದೇ ಬೆಂಕಿಯಲ್ಲಿ ಬಿದ್ದು ಬೆಂದು ಹೋಗಿರುವ ಹೃದಯವಿದ್ರಾವಕ ಘಟನೆ ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದಲ್ಲಿ ನಡೆದಿದೆ.

ಬೆಂಕಿಯ ಕೆನಾಲೆಗೆ ರೈತನ ಕೈಕಾಲು, ಬೆನ್ನಿಗೆ, ತಲೆಗೆ, ಕೊನೆಗೆ ಮೈಮೇಲೆಲ್ಲಾ ಬೆಂಕಿಬಿದ್ದು ರೈತ ಸಾವನ್ನಪ್ಪಿದ್ದಾನೆ. ಇನ್ನು ಮೃತ ರೈತ ನಿಂಗಪ್ಪ ಹಾದಿಮನಿ ದೇಹ ಭಾಗಶಃ 75% ಸುಟ್ಟು ಕರಕಲಾಗಿತ್ತು. ಮೃತ ರೈತನ ಸಂಬಂಧಿಕರು ಪರಿಹಾರಕ್ಕಾಗಿ ಸರಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುತ್ತಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

Edited By : Nirmala Aralikatti
PublicNext

PublicNext

19/01/2022 05:58 pm

Cinque Terre

106.43 K

Cinque Terre

3

ಸಂಬಂಧಿತ ಸುದ್ದಿ