ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪನಿಗೆ ಅಂಜಿ ಆರನೆ ಮಹಡಿಯಿಂದ ಜಿಗಿದ ಬಾಲೆ ಬದುಕುವುದೇ ಡೌಟ್!

ಮುಂಬೈ: ಮನೆಯರ ಕಣ್ಣು ತಪ್ಪಿಸಿ 16 ರ ಬಾಲೆ ತನ್ನ ಸ್ನೇಹಿತನೊಂದಿಗೆ ಮಾತನಾಡುವಾಗ ಅಪ್ಪನ ಕೈಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಇನ್ನು ಅಪ್ಪನಿಗೆ ಅಂಜಿ 6 ನೇ ಮಹಡಿಯಿಂದ ಜಿಗಿದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ವೆರ್ ಸೋವಾ ನಿವಾಸಿಯಾಗಿರುವ 16 ವರ್ಷದ ಬಾಲಕಿ ಮನೆಯವರು ಆರನೇ ಮಹಡಿಯಲ್ಲಿ ವಾಸವಾಗಿದ್ದರು. ಬಾಲಕಿ ಗೆಳೆಯನ ಜೊತೆ ಫೋನಿನಲ್ಲಿ ಪ್ರೀತಿ-ಪ್ರೇಮದ ವಿಷಯ ಮಾತನಾಡುತ್ತಿದ್ದುದನ್ನು ಆಕೆಯ ತಂದೆ ಕೇಳಿಸಿಕೊಂಡಿದ್ದಾರೆ.

ಮಗಳಿಗೆ ಬೈಯುವ ನಿಟ್ಟಿನಲ್ಲಿ ಅವರು ಹತ್ತಿರ ಬಂದಿದ್ದಾರೆ. ಇದನ್ನು ನೋಡಿದ ಬಾಲಕಿ ಭಯಗೊಂಡು ತಾಯಿಯ ಸೀರೆಯಿಂದ ಕೆಳಗಿಳಿಯಲು ಪ್ರಯತ್ನಿಸಿ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಮಗಳು ಕೆಳಗೆ ಬೀಳುತ್ತಿದ್ದಂತೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಡುಗಿಯ ಬೆನ್ನುಮೂಳೆಗೆ ಗಂಭೀರ ಪೆಟ್ಟಾಗಿದ್ದು, ಬದುಕುವ ಸಾಧ್ಯತೆ ಕಡಿಮೆ ಇರುವುದಾಗಿ ವೈದ್ಯರು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

22/12/2021 08:47 pm

Cinque Terre

64.72 K

Cinque Terre

9

ಸಂಬಂಧಿತ ಸುದ್ದಿ