ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಸ್ಕಾಂ ಯಡವಟ್ಟು : ಸುಟ್ಟು ಕರಕಲಾಯಿತು ಕಬ್ಬು

ವಿಜಯಪುರ : ಹೆಸ್ಕಾಂ ಯಡವಟ್ಟಿನಿಂದಾಗಿ ಬರೋಬ್ಬರಿ 4 ಏಕರೆ ಕಬ್ಬು ಸುಟ್ಟು ಭಸ್ಮವಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ನಡೆದಿದೆ. ರೈತ ರಾಮಣ್ಣ ಗುರಿಕಾರ ಎಂಬುವರಿಗೆ ಸೇರಿದ ಕಬ್ಬಿನ ಹೊಲದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿದ ಬೆಂಕಿ ಸಿಹಿ ಕಬ್ಬನ್ನು ಕರಕಲಾಗಿಸಿದೆ.

ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರು ಸ್ಪಂದನೆ ನೀಡದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಅಗ್ನಿಶಾಮಕ ದಳ ದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಇಷ್ಟೇಲ್ಲಾ ಅವಾಂತರಕ್ಕೆ ಹೆಸ್ಕಾಂ ಅಧಿಕಾರಿಗಳೇ ಕಾರಣ ವಿದ್ಯುತ್ ಕಂಬ ಎತ್ತರಿಸದ ಹಿನ್ನೆಲೆಯಲ್ಲಿ ಕಬ್ಬಿಗೆ ಬೆಂಕಿ ಬಿದ್ದಿದೆ ಎಂದು ರೈತರು ಆರೋಪಿಸಿದ್ದಾರೆ. ಸ್ಥಳಕ್ಕೆ ಹೆಸ್ಕಾ ಅಧಿಕಾರಿಗಳು ಆಗಮಿಸುವಂತೆ ರೈತರ ಒತ್ತಾಯಿಸಿದ್ದಾರೆ.

Edited By : Nagesh Gaonkar
PublicNext

PublicNext

22/12/2021 06:06 pm

Cinque Terre

44.13 K

Cinque Terre

0