ಅಮರಾವತಿ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಹೊಳೆಗೆ ಉರುಳಿದ ಪರಿಣಾಮ 5 ಮಹಿಳೆಯರು ಸೇರಿದಂತೆ ಕನಿಷ್ಠ 9 ಜನರು ಸಾವನ್ನಪ್ಪಿದ ಭಾರೀ ದುರಂತ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಇಂದು ನಡೆದಿದೆ.
ತೆಲಂಗಾಣದ ಅಶ್ವರಾವ್‍ಪೇಟೆಯಿಂದ ಜಂಗಾರೆಡ್ಡಿಗುಡೆಮ್‍ಗೆ ತೆರಳುತ್ತಿದ್ದ ಬಸ್‌ನಲ್ಲಿ ಸುಮಾರು 47 ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ಎಪಿಎಸ್‌ಆರ್‌ಟಿಸಿ ಬಸ್ ಚಾಲಕ ಜಲ್ಲೇರು ನದಿಗೆ ಅಡ್ಡಲಾಗಿರುವ ಸೇತುವೆಯ ಮೇಲೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಯನ್ನು ತಪ್ಪಿಸಲು ಪ್ರಯತ್ನಿಸಿದ್ದಾನೆ. ಆದರೆ ಬಸ್ ಸೇತುವೆಯ ರೇಲಿಂಗ್‍ಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದಿದೆ. ಪರಿಣಾಮ ಬಸ್‌ನಿಂದ ಬರಲು ಸಾಧ್ಯವಾಗದೆ 9 ಜನರು ಸಾವನ್ನಪ್ಪಿದ್ದಾರೆ.
PublicNext
15/12/2021 08:05 pm