ಗುಜರಾತ್:ಇಲ್ಲೊಂದು ಮದುವೆಯಲ್ಲಿ ಮದುಮಗ ಕುಳಿತಿದ್ದ ಕುದುರೆ ಸಾರೋಟ್ ಗೆ ಬೆಂಕಿ ಬಿದ್ದಿದೆ. ಬೆಂಕಿಯ ಕಾರಣ ಏನೂ ಅಂತ ತಿಳಿದಿಲ್ಲ. ಆದರೆ ಮದುವೆ ಮೆರವಣಿಗೆ ಅದ್ಧ್ವಾನ ಆಗಿದೆ. ಬನ್ನಿ, ಹೇಳ್ತಿವೆ.
ಉತ್ತರ ಭಾರತದ ಮದುವೆಗಳಲ್ಲಿ ಕುದುರೆ ಬಳಸುವುದು ಸರ್ವೆ ಸಾಮಾನ್ಯ. ಕುದುರೆ ಸಾರೋಟು ಬಳಸುವುದು ಕೂಡ ಅಷ್ಟೇ ಕಾಮನ್.ಆದರೆ ಈ ಕುದುರೆ ಅವಾಂತರಗಳು ಅಷ್ಟೇ ಸಜಹವಾಗಿಯೇ ಇರುತ್ತವೆ ಬಿಡಿ.
ಅದರಂತೆ ಗುಜರಾತ್‌ನ ಮದುವೆಯೊಂದರಲ್ಲಿ ಕುದುರೆ ಸಾರೋಟು ಬಳಸಲಾಗಿತ್ತು. ರಾತ್ರಿ ವೇಳೆ ಭರ್ಜರಿಯಾಗಿ ಮೆರವಣಿಗೆನೂ ನಡೆದಿತ್ತು.ಆದರೆ ಕುದುರೆ ಸಾರೋಟ್‌ಗೆ ಬೆಂಕಿ ಬಿದ್ದು ಬಿಡ್ತು ನೋಡಿ. ಎಲ್ಲರೂ ಇದನ್ನ ಆರಿಸೋದರಲ್ಲಿಯೇ ನಿರತರಾದರು. ಆಗ ಇಲ್ಲಿ ಎಲ್ಲವೂ ಅಯೋಮಯ.ಮದುಮಗ ಅಂತೂ ಇದರಿಂದ ಸಿಕ್ಕಾಪಟ್ಟೆ ಕಿರಿ-ಕಿರಿ ಅನುಭವಿಸಿದ್ದು ಅಷ್ಟೇ ಸತ್ಯ.
PublicNext
15/12/2021 12:14 pm