ವಿಜಯಪುರ: ಬೋಗಿ ಬಿಟ್ಟು ಓಡಿದ ರೈಲು-ಬೋಗಿಯಲ್ಲಿಯೇ ಗಾಬರಿಯಾಗಿ ಉಳಿದ ಪ್ರಯಾಣಿಕರು. ಹೌದು ಈ ಒಂದು ಘಟನೆ ಇಂದು ವಿಜಯಪುರ ನಗರದ ವಜ್ರ ಹನುಮಾನ ದೇವಸ್ಥಾನದ ಬಳಿ ನಡೆದಿದೆ.
ಸೊಲ್ಲಾಪುರ-ವಿಜಯಪುರ-ಮೈಸೂರ ಸಂಪರ್ಕಿಸೋ ಗೋಲಗುಂಬಜ್ ಎಕ್ಸಪ್ರೆಸ್ ರೈಲು ಎಂದಿನಂತೆ ಇಂದು ಸಂಚಾರ ಆರಂಭಿಸಿತ್ತು. ಆದರೆ ವಿಜಯಪುರದ ವಜ್ರ ಹನುಮಾನ್ ದೇವಸ್ಥಾನಕ್ಕೆ ಬರುತ್ತಿದ್ದಂತೇನೆ, ರೈಲಿನ ಎರಡು ಬೋಗಿಗಳ ಸಂಪರ್ಕ ಕಟ್ ಆಗಿ ಬಿಟ್ಟಿದೆ.
ಆದರೆ ಸ್ವಲ್ಪ ದೂರ ಚಲಿಸಿದ ರೈಲು ಮುಂದೆ ಹೋಗಿ ನಿಂತು ಬಿಟ್ಟಿದೆ. ಅಷ್ಟೇ ನೋಡಿ, ಆದರೂ ಪ್ರಯಾಣಿಕರಿಗೆ ಇನ್ನಿಲ್ಲದಂತೆ ಆತಂಕವೂ ಇತ್ತು.ಆದರೆ ಅದೃಷ್ಠವಶಾತ್ ಯಾರಿಗೂ ಏನೂ ಆಗಿಲ್ಲ ಬಿಡಿ.
ರೈಲು ಬೋಗಿಯ ಸಂಪರ್ಕ್ ಕಟ್ ಆಗಿರೋದ್ರಿಂದಲೇ ಈ ಘಟನೆ ಸಂಭವಿಸಿದೆ.ಸ್ಥಳಕ್ಕೆ ರೇಲ್ವೆ ಇಲಾಖೆ ಅಧಿಕಾರಿಗಳು ಭೇಟಿಕೊಟ್ಟಿದ್ದಾರೆ. ಎಲ್ಲವನ್ನ ಪರಿಶೀಲಿಸಿದ್ದಾರೆ. ಕೊಂಡಿ ದುರಸ್ಥಿ ಬಳಿಕವೇ ರೈಲು ಪ್ರಯಾಣ ಬೆಳಸಲಿದೆ.
PublicNext
14/12/2021 07:08 pm