ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್​​​ಗೆ ಡಿಕ್ಕಿ ತಪ್ಪಿಸಲು ಯತ್ನಿಸಿ ಬಸ್ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ, 30 ಜನರಿಗೆ ಗಾಯ

ರಾಯಚೂರು: ಬೈಕ್ ಡಿಕ್ಕಿ ತಪ್ಪಿಸಲು ಯತ್ನಿಸಿದ ಬಸ್‌ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿ 30 ಜನರು ಗಾಯಗೊಂಡಿರುವ ಘಟನೆ ರಾಯಚೂರಿನ ದೇವದುರ್ಗದ ಕೊತ್ತದೊಡ್ಡಿ ಬಳಿ ಘಟನೆ ನಡೆದಿದೆ.

ರಾಯಚೂರಿನ ಅರಕೇರಾ ಪಟ್ಟಣದ ಜನರು ಮಹಾರಾಷ್ಟ್ರದ ಪುಣೆಗೆ ಕೂಲಿ ಕೆಲಸಕ್ಕೆ ಗುಳೆ ಹೋಗಿದ್ದವರು. ಆದರೆ ಸಂಬಂಧಿಯೊಬ್ಬರು ಸಾವನ್ನಪ್ಪಿದ್ದರಿಂದ ಖಾಸಗಿ ಬಸ್‌ನಲ್ಲಿ ತಮ್ಮ ಪಟ್ಟಣಕ್ಕೆ ಮರಳುತ್ತಿದ್ದರು. ಆದರೆ ದೇವದುರ್ಗದ ಕೊತ್ತದೊಡ್ಡಿ ಬಳಿ ಬೈಕ್‌ಗೆ ಬಸ್‌ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಚಾಲಕ ಯತ್ನಿಸಿದ್ದಾನೆ. ಆದರೆ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಪಲ್ಟಿಯಾಗಿದೆ.

ಘಟನೆ ಬಳಿಕ ಬಸ್ ಚಾಲಕ, ಬೈಕ್ ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ದೇವದುರ್ಗ ತಾಲೂಕು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Vijay Kumar
PublicNext

PublicNext

11/12/2021 04:34 pm

Cinque Terre

24.11 K

Cinque Terre

0

ಸಂಬಂಧಿತ ಸುದ್ದಿ