ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆ- ಮಹಿಳೆ ಬಚಾವ್.!

ಮುಂಬೈ: ಚಲಿಸುವ ರೈಲಿನಿಂದ ಇಳಿಯುವುದು, ರೈಲಿನಲ್ಲಿ ಹತ್ತುವುದು ತುಂಬಾ ಅಪಾಯಕಾರಿ. ಹೀಗಿದ್ದರೂ ಕೆಲವರು ಅವಸರಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಬಗ್ಗೆ ಹೇಳಿದ್ದೇವೆ, ನೋಡಿದ್ದೇವೆ. ಇಂತಹದ್ದೇ ಘಟನೆಯೊಂದು ಮಹಾರಾಷ್ಟ್ರದ ಡೊಂಬಿವಿಲಿ ರೈಲು ನಿಲ್ದಾಣದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ನಡೆದಿದ್ದು, ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಹೌದು.ಮಹಿಳೆಯು ಚಲಿಸುತ್ತಿರುವ ರೈಲು ಹತ್ತುತ್ತಿದ್ದಾಗ ಜಾರಿ ಕೆಳಗೆ ಬಿದ್ದಿದ್ದಾಳೆ. ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಅಂತರದಲ್ಲಿ ಬೀಳುವುದಕ್ಕೂ ಮುನ್ನವೇ ಅಲ್ಲೇ ನಿಂತಿದ್ದ ಭದ್ರತಾ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ. ಭದ್ರತಾ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Edited By : Nagesh Gaonkar
PublicNext

PublicNext

04/12/2021 07:49 pm

Cinque Terre

87.76 K

Cinque Terre

3

ಸಂಬಂಧಿತ ಸುದ್ದಿ