ಹಾವೇರಿ : ಬಿಸಲು ಮಳೆ ಲೇಖಿಸದೇ ಶ್ರಮವಹಿಸಿ ದುಡಿದ ಅನ್ನದಾತನ ಅಂಬಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ಹಾವೇರಿ ತಾಲೂಕಿನ ಚನ್ನಳ್ಳಿ ಹೊಸರಿತ್ತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ತಡರಾತ್ರಿ ದುಷ್ಟರು ಮೆಕ್ಕೆಜೋಳ ರಾಶಿಗೆ ಬೆಂಕಿ ಹಚ್ಚಿದ್ದಾರೆ. ಮೂರು ತೆನೆ ರಾಶಿಗಳು ಸುಟ್ಟು ಕರಕಲಾಗಿವೆ.
ಗದಿಗೆಪ್ಪ ಹಾಗೂ ಬಸವರಾಜ್ ಚಿಗಹಳ್ಳಿ ಎಂಬ ಸಹೋದರರಿಗೆ ಸೇರಿದ ಮೆಕ್ಕೆಜೋಳ ರಾಶಿ ಇವಾಗಿವೆ. ಒಬರೋಬ್ಬರಿ 15 ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಇದಾಗಿದ್ದು ಸುಮಾರು 10 ಲಕ್ಷ ಮೌಲ್ಯದ ಬೆಳೆ ಬೆಂಕಿ ಪಾಲಾಗಿದೆ.
ಇನ್ನು ಮೆಕ್ಕೆಜೋಳದ ರಾಶಿಗೆ ಹತ್ತಿದ ಬೆಂಕಿ ಪಕ್ಕದ ಶೇಂಗಾ ಬಣವಿವಿಗೂ ವ್ಯಾಪಿಸಿ ಅದು ಸುಟ್ಟು ಹೋಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಗುತ್ತಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
04/12/2021 01:46 pm