ಹೈದರಾಬಾದ್: ವಿದೇಶಕ್ಕೆ ಹೋದ ಯುವಕ ಮರಳಿ ದೇಶಕ್ಕೆ ಬರುವ ಹುಮ್ಮಸ್ಸಿನಲ್ಲಿ ಮನೆಯವರಿಗಾಗಿ ಉಡುಗೊರೆ ಕೊಳ್ಳಲು ಹೋಗುವಾಗ ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ಅಮೆರಿಕದ ಬಕಿ ರಾಜ್ಯದ ಓಹಿಯೋದಲ್ಲಿ ನಡೆದಿದೆ. ಹೌದು ತೆಲಂಗಾಣ ಮೂಲದ ಯುವಕ ಚಿರು (22) ಮೃತ ಯುವಕ. ಈತ ತೆಲಂಗಾಣದ ಸೂರ್ಯಪೇಟೆಯ ನಿವಾಸಿ. ಓಹಿಯೋ ನಗರದಲ್ಲಿ ವಾಸವಿದ್ದ.
ಡಿಸೆಂಬರ್ 15ರಂದು ತಾಯ್ನಾಡಿಗೆ ಮರಳಲು ಸಿದ್ಧವಾಗಿದ್ದ. ಮನೆಯವರಿಗಾಗಿ ಯುವತಿಯೊಬ್ಬಳ ಜತೆ ಶಾಪಿಂಗ್ ಗೆ ಹೋಗುವಾಗ ಕಾರು ಸ್ಕಿಡ್ ಆಗಿ ಎದುರಿಗೆ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಿರು ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಾಯಿ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ ಓದುತ್ತಿದ್ದ. ಯುವತಿ ತೆಲಂಗಾಣದ ಮೂಲದವರು ಎಂದು ತಿಳಿದುಬಂದಿದೆ.
PublicNext
30/11/2021 01:52 pm