ಚಿಕ್ಕಬಳ್ಳಾಪುರ: ಅಕಾಲಿಕ ಮಳೆಯಿಂದ ಕೆರೆಕಟ್ಟೆಯ ಮೇಲೆ ರಭಸದಿಂದ ನೀರು ಹರಿಯುತ್ತಿತ್ತು. ಈ ವೇಳೆ ದುಸ್ಸಾಹಸಕ್ಕೆ ಮುಂದಾದ ಖಾಸಗಿ ಬಸ್ ಚಾಲಕ ಕಟ್ಟೆಯ ಮೇಲೆ ಬಸ್ ನುಗ್ಗಿಸಿದ್ದಾನೆ. ಇನ್ನೇನು ಬಸ್ ಕೋಡಿಗೆ ಬಿತ್ತು ಎನ್ನುವಷ್ಟರಲ್ಲಿ ಕಂಟ್ರೋಲ್‌ಗೆ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆಂಧ್ರ ಗಡಿ ಭಾಗದ ಹಿಂದೂಪುರದ ಕೊಲ್ಲಕುಂಟದ ಬಳಿ ಈ ಘಟನೆ ನಡೆದಿದೆ. ಬಸ್ ನಿಂತ ಕೂಡಲೇ ಪ್ರಯಾಣಿಕರು ಇಳಿದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಕಟ್ಟೆಯ ತುದಿಯಲ್ಲಿ ತಡೆಕಂಬಗಳಿದ್ದರಿಂದ ಎಲ್ಲ ಪ್ರಯಾಣಿಕರ ಪ್ರಾಣ ಉಳಿದಿದೆ. ಹಳ್ಳಿಗಳಿಂದ ಮಹಿಳಾ ಕಾರ್ಮಿಕರನ್ನ ಗಾರ್ಮೆಂಟ್ ಫ್ಯಾಕ್ಟರಿಗೆ ಕರೆದೊಯ್ಯತ್ತಿದ್ದ ಬಸ್ ಇದಾಗಿದೆ. ಅಪಾಯದ ಮುನ್ಸೂಚನೆ ಇದ್ದರೂ ಚಾಲಕ ಬಸ್ಅನ್ನು ಮುನ್ನುಗ್ಗಿಸಿದ್ದಾನೆ.
PublicNext
23/11/2021 06:51 pm