ತಿರುವನಂತಪುರಂ: ದೀಪಾವಳಿ ಸಂಭ್ರಮಕ್ಕಾಗಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ಪಟಾಕಿ ಮಾರ್ಗ ಮಧ್ಯದಲ್ಲೇ ಸ್ಫೋಟಗೊಂಡ ಪರಿಣಾಮ ಅಪ್ಪ- ಮಗ ಪ್ರಾಣ ಕಳೆದುಕೊಂಡ ಘಟನೆ ಪುದುಚೇರಿಯಲ್ಲಿ ನಡೆದಿದೆ.
ಹೌದು. ಪುದುಚೇರಿ-ವಿಲ್ಲುಪುರಂ ಗಡಿಯಲ್ಲಿ ಈ ಘಟನೆ ನಡೆದಿದೆ. ತಂದೆ ಕಲೈನೇಸನ್ ಮತ್ತು ಅವರ 7 ವರ್ಷದ ಮಗ ಪ್ರದೀಪ್ ನಿನ್ನೆ (ಗುರುವಾರ) ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಪೂರ್ವ ಕರಾವಳಿ ರಸ್ತೆಯಲ್ಲಿರುವ ಕೂನಿಮೇಡು ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ದೀಪಾವಳಿಯ ಸಂಭ್ರಮಕ್ಕಾಗಿ ಅಪ್ಪ-ಮಗ ಪಟಾಕಿಗಳನ್ನು ಖರೀದಿಸಿ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟುಕೊಂಡು ಹೋಗುತ್ತಿದ್ದರು. ಈ ವೇಳೆ ನಡು ರಸ್ತೆಯಲ್ಲಿ ಪಟಾಕಿ ಸ್ಫೋಟಗೊಂಡು, ಸ್ಕೂಟರ್ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಅಪ್ಪ-ಮಗ ಸಾವನ್ನಪ್ಪಿದ್ದು, ಇಬ್ಬರ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
05/11/2021 08:41 pm