ವಿಜಯಪುರ: ಕಾರು ಹರಿದು ತಾಯಿ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವಿಜಯಪುರ ತಾಲೂಕಿನ ತಿಡಗುಂದಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಹೆದ್ದಾರಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಸ್ಥಳದಲ್ಲಿಯೇ 4ವರ್ಷದ ಮಗು ಸಮೇತ ತಾಯಿ ಸಾವನ್ನಪ್ಪಿದ್ದಾರೆ.
ತಿಡಗುಂದಿ ಗ್ರಾಮದ ಗೀತಾ ಪೂಜಾರಿ (35) ಹಾಗೂ ಆಕೆಯ ಮಗು ಮಂಜು ಪೂಜಾರಿ (4) ಮೃತರು. ಘಟನೆ ಬಳಿಕ ಕಾರ್ ಚಾಲಕನನ್ನು ಹಿಡಿದಿರುವ ಸ್ಥಳೀಯರು, ಪೊಲೀಸರಿಗೆ ನೀಡಿದ್ದಾರೆ. KA 28 – P 0922 ನಂಬರಿನ ಕಾರ್, ತಾಯಿ-ಮಗುವಿನ ಮೇಲೆ ಹರಿದಿದೆ. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆದ್ದಾರಿ ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
PublicNext
03/11/2021 01:12 pm