ತುಮಕೂರು: ಅಲ್ಲಿ ಸರದಿ ಸಾಲಿನಲ್ಲಿ ಬರುತ್ತಿದ್ದ ವಾಹನ ತಪಾಸಣೆ ನಡೆಯುತ್ತಿತ್ತು. ಇದನ್ನು ಗಮನಿಸಿದ ಯುವಕರಿಬ್ಬರು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆ ತಿಪಟೂರು ತಾಲೂಕು ಬಳುವನೇರಳು ಗೇಟ್ ಬಳಿ ನಡೆದಿದೆ.
ನಾಗರಾಜು(60) ಮತ್ತು ಚಿದಾನಂದ (45) ಮೃತರು. ಬಳುವನೇರಳು ಗೇಟ್ ಬಳಿ ಪೊಲೀಸರು ಇರುವುದನ್ನ ನೋಡಿದ ಇವರಿಬ್ಬರೂ ಹೆದರಿ ಬೈಕ್ ಅನ್ನು ಬೇರೆಡೆಗೆ ತಿರುಗಿಸಿದ್ದು, ಈ ವೇಳೆ ಎದುರಿಗೆ ಬರುತ್ತಿದ್ದ ಬುಲೆರೋ ಜೀಪ್ ಗೆ ಡಿಕ್ಕಿಯಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಗೆ ಪೊಲೀಸರೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
PublicNext
27/10/2021 02:17 pm