ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಈಜಲು ಹೋದ ಬಾಲಕ ಶವವಾಗಿ ಪತ್ತೆ

ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋದ ಬಾಲಕ ಮುಳುಗಿ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಚಂದ್ರಕಟ್ಟೆ ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದೆ.

ಸುಹಾಸ್ (12) ಎಂಬಾತನೇ ಮೃತ ಬಾಲಕ. ತನ್ನ ಇಬ್ಬರು ಸ್ನೇಹಿತರೊಂದಿಗೆ ಸುಹಾಸ್ ಈಜಲು ಹೋಗಿದ್ದ ಎನ್ನಲಾಗಿದೆ. ಈ ಮಕ್ಕಳು ಕೆಂಪನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಮೃತ ಸುಹಾಸ ತನ್ನ ತಾತನ ಮನೆಯಲ್ಲಿ ಇದ್ದು ವ್ಯಾಸಂಗ ಮಾಡುತ್ತಿದ್ದ. ಮಳೆ ಬಂದು ಕೆರೆ ಸಂಪೂರ್ಣ ತುಂಬಿದ ಕಾರಣ ಈಜುವಾಗ ಸುಸ್ತಾದ ಸುಹಾಸ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಶವವನ್ನು ದಡಕ್ಕೆ ತಂದಿದ್ದಾರೆ.

Edited By : Nagesh Gaonkar
PublicNext

PublicNext

25/10/2021 06:20 pm

Cinque Terre

42.07 K

Cinque Terre

0

ಸಂಬಂಧಿತ ಸುದ್ದಿ