ಯಾದಗಿರಿ: ಜಮೀನೊಂದರ ನೆಲ ಬೋರ್ ನ ವಿದ್ಯುತ್ ತಂತಿ ತಗುಲಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮಹೇಶ ತಂದೆ ಮಲ್ಲಪ್ಪ ಯಾದವ (25) ಮೃತ ವ್ಯಕ್ತಿ. ಹತ್ತಿ ಬೆಳೆಗೆ ಕ್ರಿಮಿನಾಶಕ ಔಷಧಿ ಸಿಂಪಡಿಸುವ ಸಲುವಾಗಿ ಬೋರ್ ನಿಂದ ನೀರು ತರಲು ಹೋದಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ.
ಚಿಕ್ಕಮ್ಮನೊಂದಿಗೆ ಹೊಲಕ್ಕೆ ತೆರಳಿದ್ದ ಮಹೇಶ್ ಕ್ರಿಮಿನಾಶಕ ಔಷಧಿಗೆ ನೀರು ಮಿಶ್ರಣ ಮಾಡುವುದಕ್ಕಾಗಿ ಪಕ್ಕದ ಜಮೀನಿನಲ್ಲಿದ್ದ ನೆಲ ಬೋರ್ ಸ್ಟಾರ್ಟ್ ಮಾಡಿದ್ದು, ಬೋರ್ ನ ಪೈಪ್ ಜೋರಾಗಿ ತಿರುವಿದ್ದಾನೆ. ಪೈಪ್ ಗೆ ಹೊಂದಿಕೊಂಡಿದ್ದ ವೈರ್ ಕಟ್ ಆದ ಪರಿಣಾಮ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನು ಮೃತ ಕುಟುಂಬಸ್ಥರ ಆಕ್ರಂದನವಂತೂ ಮುಗಿಲು ಮುಟ್ಟಿದ್ದು, ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
-ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
21/10/2021 01:45 pm