ಭೋಪಾಲ್: ಈಗ ಇದ್ದವರು ಇನ್ನೊಂದು ಕ್ಷಣದಲ್ಲಿ ಇರುತ್ತಾರೆ ಎನ್ನುವ ನಂಬಿಕೆಯನ್ನು ಹುಸಿಯಾದ ಕೆಲವು ಘಟನೆಗಳನ್ನು ನೋಡಿದ್ದೇವೆ. ಸದ್ಯ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಇಂಥದ್ದೆ ಮನಕಲಕುವ ಘಟನೆ ನಡೆದಿದೆ.
ಭೋಪಾಲ್ನಲ್ಲಿ ಕೆಲ ವೈದ್ಯರು ಸೇರಿಕೊಂಡು ನೃತ್ಯ ಮಾಡುತ್ತಿದ್ದ ವೇಳೆ ವಿಧಿವಿಜ್ಞಾನ ತಜ್ಞ ಡಾ. ಸಿ.ಎಸ್ ಜೈನ್ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಭೋಪಾಲ್ನ ಪ್ರಸಿದ್ಧ ವೈದ್ಯರಾಗಿರುವ ಸಿ.ಎಸ್ ಜೈನ್, ತಮ್ಮ ಹಳೆಯ ಸಹೋದ್ಯೋಗಿಗಳ ಜೊತೆ ಸೇರಿ ಡ್ಯಾನ್ಸ್ ಮಾಡುತ್ತಿದ್ದರು. ಇದರಲ್ಲಿ ಹೃದ್ರೋಗ ತಜ್ಞರು ಸೇರಿದಂತೆ ವಿವಿಧ ವಿಭಾಗಗಳ 50ಕ್ಕೂ ಹೆಚ್ಚು ಹಿರಿಯ ವೈದ್ಯರು ಭಾಗಿಯಾಗಿದ್ದರು. ಎಲ್ಲರೂ ನಗುನಗುತ್ತಾ ಡ್ಯಾನ್ಸ್ ಮಾಡ್ತಿದ್ದಾಗಲೇ ಈ ದುರ್ಘಟನೆ ನಡೆದಿದೆ. ಹೀಗಾಗಿ ಸಂಭ್ರಮದಲ್ಲಿ ತೇಲಾಡುತ್ತಿದ್ದ ಕಾರ್ಯಕ್ರಮದಲ್ಲಿ ದಿಢೀರ್ ಶೋಕ ಮನೆ ಮಾಡಿದೆ.
PublicNext
19/10/2021 08:12 pm