ಮುಂಬೈ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ ವೃದ್ಧೆಯನ್ನು ಓರ್ವ ಪ್ರಯಾಣಿಕ ಹಾಗೂ ಆರ್‌ಪಿಎಫ್ ಸಿಬ್ಬಂದಿ ರಕ್ಷಿಸಿದ ಸಾಹಸದ ಘಟನೆ ಮುಂಬೈನ ವಸೈ ರೋಡ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ಸಂಜೆ 5: 30 ರ ಸುಮಾರಿಗೆ ವೃದ್ಧೆ ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ. ಈ ದುರ್ಘಟನೆಯ ವಿಡಿಯೋವನ್ನು ಮುಂಬೈನ ರೈಲ್ವೇ ಪೊಲೀಸ್ ಕಮೀಷನರ್ ಕ್ವೈಸರ್ ಖಾಲಿದ್ ಟ್ವೀಟ್ ಮಾಡಿದ್ದಾರೆ. ಜೊತೆಗೆ, 'ಅಜಾಗರೂಕ ಪ್ರಯಾಣವು ಹೇಗೆ ಮಾರಕವಾಗಬಹುದು ಎಂಬುದನ್ನು ಈ ಘಟನೆ ನೆನಪಿಸುತ್ತದೆ. ಕೆಚ್ಚೆದೆಯ ಧೈರ್ಯ ತೋರಿದ ಆರ್‌ಪಿಎಫ್ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗುವುದು' ಎಂದು ಬರೆದುಕೊಂಡಿದ್ದಾರೆ.
PublicNext
20/09/2021 03:50 pm