ಬೆಳಗಾವಿ : ರಾಜ್ಯದಲ್ಲಿ ಇತ್ತಿಚ್ಚೆಗೆ ಕೊಂಚ ಮಟ್ಟಿಗೆ ಬೋರ್ ವೆಲ್ ದುರಂತದ ಘಟನೆಗಳು ಕಡಿಮೆಯಾಗಿದ್ದವು. ಆದರೆ ಇಂದು ಕುಂದಾನಗರಿ ಬೆಳಗಾವಿಯಲ್ಲಿ ಎರಡೂವರೆ ವರ್ಷದ ಮಗುವೊಂದು ಬೋರ್ ವೆಲ್ ಗೆ ಬಿದ್ದು ಸಾವನ್ನಪ್ಪಿದೆ. ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ಘಟನೆ ನಡೆದಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಮಗುವಿನ ಮೃತದೇಹವನ್ನು ಹೊರ ತೆಗೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಶರತ್ ಹಸಿರೆ ಮೃತ ಎರಡೂವರೆ ವರ್ಷದ ಮಗು. ಎರಡು ದಿನಗಳಿಂದ ಮಗು ನಾಪತ್ತೆಯಾಗಿತ್ತು. ಈ ಬಗ್ಗೆ ಮಗುವಿನ ತಂದೆ ಪೊಲೀಸ್ ಠಾಣೆಗೆ ಹೋಗಿ ಕಿಡ್ನಾಪ್ ದೂರು ನೀಡಿದ್ದರು. ಆದ್ರೆ, ಮಗು ಬೋರ್ ವೆಲ್ ಗೆ ಬಿದ್ದಿರುವುದು ಇಂದು (ಸೆ.18) ಗೊತ್ತಾಗಿದೆ. ವಿಷಯ ತಿಳಿದು ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆಗೆ ಕಾರ್ಯಚರಣೆಗಿಳಿದರು ಪ್ರಯೋಜನವಾಗಿಲ್ಲ. ಸದ್ಯ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
PublicNext
18/09/2021 09:07 pm