ಮುಂಬೈ: ಮಹಾನಗರ ವ್ಯಾಪ್ತಿಯ ಬೃಹತ್ ಗುಜರಿ ಯಾರ್ಡ್ ಗೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಅಪಾರ ಪ್ರಮಾಣದ ನಷ್ಟವಾಗಿದೆ. ಗುರುವಾರ ತಡರಾತ್ರಿ ಮನಖುರ್ದ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವೇಳೆ ಸ್ಥಳದಲ್ಲಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಸಂಪೂರ್ಣ ನಂದಿಸಲಾಗಿದೆ ಎಂದು ಬೃಹನ್ ಮುಂಬೈ ಕಾರ್ಪೋರೇಷನ್ (ಬಿಎಂಸಿ) ತಿಳಿಸಿದೆ.
PublicNext
17/09/2021 10:40 am