ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆ ಆಗಬೇಕಿದ್ದವರು ಮಸಣ ಸೇರಿದರು: ಇದೆಂತಾ ದುರ್ವಿಧಿ?

ಬಳ್ಳಾರಿ: ಕೆಲವೇ ದಿನಗಳಲ್ಲಿ ಮದುವೆ ಆಗಬೇಕಿದ್ದ ಆ ಜೋಡಿ ಅಪಘಾತಕ್ಕೆ ಬಲಿಯಾಗಿ ಈಗ ಮಸಣ ಸೇರಿದೆ. ಈ ದುರಂತ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಬಳಿ ನಡೆದಿದೆ.

ವಿನಯ್(28) ಹಾಗೂ ಸವಿತಾ(24) ಎಂಬುವವರೇ ಮೃತಪಟ್ಟ ದುರ್ದೈವಿಗಳು. ಕುರುಗೋಡು ನಿವಾಸಿ ವಿನಯ್ ಹಾಗೂ ವೀರಾಪುರ ಸೌಜನ್ಯಗೆ ಕಳೆದ ವಾರ ನಿಶ್ಚಿತಾರ್ಥವಾಗಿತ್ತು.

ನಿನ್ನೆಯಷ್ಟೇ ಈ ಜೋಡಿ ಮಂತ್ರಾಲಯಕ್ಕೆ ತೆರಳಿತ್ತು‌. ದರ್ಶನ ಮುಗಿಸಿಕೊಂಡು ವಾಪಸ್ ಬರುವಾಗ ರಾರಾವಿ ಬಳಿ ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಇಡೀ ಗ್ರಾಮದ ಜನತೆ ಮರುಕಪಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

10/09/2021 05:21 pm

Cinque Terre

41.91 K

Cinque Terre

1

ಸಂಬಂಧಿತ ಸುದ್ದಿ