ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆಯಲ್ಲಿ ಭೀಕರ ಅಪಘಾತ : ಕೃಷ್ಣಾ ನದಿ ಪಾಲಾಗಬೇಕಿದ್ದ ಕಾರು ಪಾರು!

ಬಾಗಲಕೋಟೆ: ವೇಗವಾಗಿ ಬಂದು ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಚಿಕ್ಕಪಡಸಲಗಿ ಸೇತುವೆಯ ತಡೆಗೋಡೆ ಗುದ್ದಿ ಅದರ ಮೇಲೆಯೇ ನೇತಾಡಿದ ಘಟನೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಕಂಡುಬಂದಿತು. ಇನ್ನು ಅದೃಷ್ಟ ಎನ್ನುವಂತೆ ಸ್ವಲ್ಪದರಲ್ಲೇ ಕೃಷ್ಣಾ ನದಿ ಪಾಲಾಗುವ ಅಪಾಯದಿಂದ ಚಾಲಕ ಮತ್ತು ಪ್ರಯಾಣಿಕರು ಪಾರಾಗಿದ್ದಾರೆ.

ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಗುರುವಾರ ತಡರಾತ್ರಿ ಘಟನೆ ನಡೆದಿದೆ. ಅಪಘಾತ ಬಳಿಕ ಚಾಲಕ ನಾಪತ್ತೆಯಾಗಿದ್ದು, ವಾಹನ ಯಾರದ್ದು? ಎಷ್ಟು ಜನ ಇದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Edited By : Nirmala Aralikatti
PublicNext

PublicNext

10/09/2021 09:54 am

Cinque Terre

67.99 K

Cinque Terre

0

ಸಂಬಂಧಿತ ಸುದ್ದಿ